Saturday, April 19, 2025
Homeಸುದ್ದಿಗಳುಸಕಲೇಶಪುರಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರದ ಸಾಮಾಜಿಕ ಕಾರ್ಯಕರ್ತ -ಯಡೇಹಳ್ಳಿ ಮಂಜುನಾಥ್

ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರದ ಸಾಮಾಜಿಕ ಕಾರ್ಯಕರ್ತ -ಯಡೇಹಳ್ಳಿ ಮಂಜುನಾಥ್

ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರದ ಸಾಮಾಜಿಕ ಕಾರ್ಯಕರ್ತ -ಯಡೇಹಳ್ಳಿ ಮಂಜುನಾಥ್.

ಒಂಟಿ ಕಾಡಾನೆ ಕಂಡು ಭಯದಿಂದ  ಓಡಿ ಹೋದ ತೋಟದ ಕಾರ್ಮಿಕರು

ಸಕಲೇಶಪುರ : ತಾಲೂಕಿನ ಬೆಳಗೋಡು ಹೋಬಳಿ ಬಾಗೆ ಗ್ರಾಮ ವ್ಯಾಪ್ತಿಯ ಯಡೇಹಳ್ಳಿ ಗ್ರಾಮದಲ್ಲಿ ಕಾರ್ಮಿಕರೊಟ್ಟಿಗೆ ಕಾಫಿ ತೋಟಕ್ಕೆ ತೆರಳಿದ್ದ ಸಾಮಾಜಿಕ ಹೋರಾಟಗಾರ, ಕೆಪಿಸಿಸಿ ಸದಸ್ಯ ಯಡೇಹಳ್ಳಿ ಮಂಜುನಾಥ್ ರವರಿಗೆ ಒಂಟಿ ಸಲಗ ಒಂದು ಎದುರಾಗಿ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಜರುಗಿದೆ.

ಕೇವಲ 20 ಅಡಿಗಳ ಅಂತರದಲ್ಲಿ ಒಂಟಿ ಸಲಗ ಕಂಡ ಕಾರ್ಮಿಕರು ಕಿರುಚಿಕೊಂಡು ಓಡಿ ಹೋಗಿದ್ದಾರೆ.

ಅರಣ್ಯ ಇಲಾಖೆ ಕಾಡಾನೆಗಳು ಇರುವಿಕೆಯ ಬಗ್ಗೆ ಸರಿಯಾಗಿ ಮಾಹಿತಿ ಒದಗಿಸದಿರುವುದೇ ಈ ಘಟನೆಗೆ ಕಾರಣವಾಗಿದೆ.
ಯಡೇಹಳ್ಳಿ ಮಂಜುನಾಥ್ ಹಾಗೂ ಕಾರ್ಮಿಕರು ಅದೃಷ್ಟವಾಷತ್ ಯಾವುದೇ ಅಪಾಯವಿಲ್ಲದೆ ಎಲ್ಲರೂ ಪಾರಾಗಿದ್ದಾರೆ.

RELATED ARTICLES
- Advertisment -spot_img

Most Popular