ಸಕಲೇಶಪುರ : ಕಾಡಾನೆಗಳ ದಾಂದಲೆ ಅಪಾರ ಪ್ರಮಾಣದ ಹಾನಿ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಘಟನೆ.
ಸಕಲೇಶಪುರ :ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು ಕಳೆದ ರಾತ್ರಿ ಹೆಬ್ಬನಹಳ್ಳಿ ಗ್ರಾಮದಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿದ ಕಾಡಾನೆಗಳು ಮನೆಯ ಮುಂದೆ ಇಟ್ಟಿದ್ದ ಭತ್ತದ ಚೀಲಗಳನ್ನು ಚೆಲ್ಲಾಡಿದೆ.
ತಾಲೂಕಿನ ಬೆಳಗೋಡು ಹೋಬಳಿ ಹೆಬ್ಬನಹಳ್ಳಿ ಗ್ರಾಮದ ಪುಟ್ಟರಾಜು ಎಂಬವರ ಮನೆಯ ಮೇಲೆ ತಡರಾತ್ರಿ ದಾಳಿ ನಡೆಸಿದ ಎರಡು ಕಾಡಾನೆಗಳು ಸಂಗ್ರಹಿಸಿಟ್ಟಿದ್ದ ಭತ್ತದ ಚೀಲಗಳನ್ನು ಎಳೆದಾಡಿ ಅಪಾರ ಪ್ರಮಾಣದಲ್ಲಿ ನಾಶಪಡಿಸಿವೆ. ಇಷ್ಟಕ್ಕೆ ಸುಮ್ಮನಾಗದ ಕಾಡಾನೆಗಳು ಮನೆಯ ಸುತ್ತಮುತ್ತ ಇದ್ದ ಬ್ಯಾರಲ್, ಬಾಳೆ ಗಿಡಗಳು, ಪೈಪ್ ಗಳನ್ನು ನಾಶ ಪಡಿಸಿವೆ.
ಇದೇ ಹೆಬ್ಬನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ತಿಂಗಳ ಹಿಂದೆ ಮನು ಎಂಬ ಯುವ ರೈತನ ಮೇಲೆ ಕಾಡನೆಯೊಂದು ದಾಳಿ ನಡೆಸಿ ಕೊಂದು ಹಾಕಿದ್ದು ಮಾಸುವ ಮುನ್ನವೇ ಮನೆಗಳ ಮೇಲೆ ಕಾಡಾನೆಗಳ ದಾಳಿ ನಡೆಸಿರುವುದು ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಕಳೆದ ತಿಂಗಳು ಕಾಡಾನೆಯಿಂದ ಬೇಸತ್ತ ರೈತರು ತಮ್ಮ ಜಮೀನಿನಲ್ಲಿ ತೋಡಿದ್ದ ಗುಂಡಿಗೆ ಕಾಡಾನೆ ಒಂದು ಬಿದ್ದು ಜೀವನ್ಮರಣದ ನಡುವೆ ಹೋರಾಟ ನಡೆಸಿತ್ತು ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದರು ಅರಣ್ಯ ಇಲಾಖೆ ಮಾತ್ರ ಕಾಡಾನೆ ಹಾವಳಿ ತಡೆಗಟ್ಟುವಲ್ಲಿ ವಿಫಲವಾಗಿದೆ.
ಕಾಡಾನೆ ದಾಳಿಗೆ ಭತ್ತ, ಕೃಷಿ ಸಲಕರಣೆಗಳು ನಾಶವಾಗಿರುವ ರೈತ ಪುಟ್ಟರಾಜ ಅವರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಕಾಂಗ್ರೆಸ್ ಯುವ ಮುಖಂಡ ಭುವನಾಕ್ಷ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.