Monday, April 21, 2025
Homeಸುದ್ದಿಗಳುಸಕಲೇಶಪುರಕಬ್ಬಿನಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿ ಗಣರಾಜ್ಯೋತ್ಸವ ಕಾರ್ಯಕ್ರಮ

ಕಬ್ಬಿನಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿ ಗಣರಾಜ್ಯೋತ್ಸವ ಕಾರ್ಯಕ್ರಮ

ಸಕಲೇಶಪುರ: ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬ್ಬಿನಗದ್ದೆಯಲ್ಲಿ ಅದ್ದೂರಿಯಾಗಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಂತೋಷ್ ಅವರು ಮಾತನಾಡಿ ಶಾಲೆಯಲ್ಲಿ ಮಕ್ಕಳಿಗೆ ಆಟಪಾಠಗಳ ಜೊತೆ ಸಾಂಸ್ಕೃತಿಕ ಶಿಕ್ಷಣ ಕೂಡ ಮುಖ್ಯ ಪೋಷಕರು ಮಕ್ಕಳೊಂದಿಗೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಮತ್ತೋರ್ವ ಎಸ್.ಡಿ.ಎಂ.ಸಿ ಸದಸ್ಯ ತ್ಯಾಗರಾಜ್ ಮಾತನಾಡಿ ಸಂವಿಧಾನ ರಚನೆಗೆ ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ಸ್ಮರಿಸಿದರು.

ಗ್ರಾಮದ ಮುಖಂಡರಾದ ಬೈರಪ್ಪ ಶೆಟ್ಟಿ ಮಾತನಾಡಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂದು ಕರೆ ನೀಡಿದರು.
ಶಾಲಾ ವಿದ್ಯಾರ್ಥಿಗಳು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಹದೇವಮ್ಮ, ಷಣ್ಮುಖ, ಶಶಿ, ಎಸ್ ಡಿ ಎಮ್ ಸಿ ಮಾಜಿ ಅಧ್ಯಕ್ಷರಾದ ಮಂಜು ಕಬ್ಬಿನ ಗದ್ದೆ, ಎಸ್.ಡಿ.ಎಂ.ಸಿ ಎಲ್ಲಾ ಸದಸ್ಯರುಗಳು, ಮುಖ್ಯೋಪಾಧ್ಯಾಯರಾದ ಮಂಜುಳಾ, ಶಿಕ್ಷಕ ವೃಂದದವರು, ಅಡುಗೆ ಸಿಬ್ಬಂದಿಯವರು, ಅಂಗನವಾಡಿ ಶಿಕ್ಷಕಿ ಮತ್ತು ಮಕ್ಕಳು, ಕಬ್ಬಿನ ಗದ್ದೆ ಶಾಲಾ ವಿದ್ಯಾರ್ಥಿಗಳು, ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.

RELATED ARTICLES
- Advertisment -spot_img

Most Popular