ದೇವರ ದರ್ಶನ ಮುಗಿಸಿ ವಾಪಸಗುತ್ತಿದ್ದ ಪತ್ರಕರ್ತರ ಕಾರು ಪಲ್ಟಿ
ಸಕಲೇಶಪುರ : ಉಡುಪಿ ಜಿಲ್ಲೆ ಯ ಪತ್ರಕರ್ತರಿದ್ದ ಕಾರು ಪಲ್ಟಿಯಾಗಿರುವ ಘಟನೆ ನೆಡೆದಿದೆ.ತಾಲೂಕಿನ ಬಾಳ್ಳು ಪೇಟೆ ಗ್ರಾಮದ ಬಳಿ ಶನಿವಾರ ಸಂಜೆ ಘಟನೆ ಜರುಗಿದ್ದು ಕಾರಿನಲ್ಲಿದ್ದ ನಾಲ್ವರು ಪತ್ರಕರ್ತರ ಪೈಕಿ ಇಬ್ಬರಿಗೆ ಹೆಚ್ಚಿನ ಗಾಯಗಳಾಗಿದ್ದು ಎಲ್ಲರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಉಡುಪಿಯಿಂದ ಆಲೂರು ತಾಲೂಕಿನ ಪಾಳ್ಯ ಬಳಿವಿರುವ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದ ಪತ್ರಕರ್ತರು ದೇವರ ದರ್ಶನ ಮುಗಿಸಿ ಉಡುಪಿಗೆ ಹಿಂದುರುಗುವ ವೇಳೆ ಈ ದುರ್ಘಟನೆ ನಡೆದಿದೆ.
ನ್ಯೂಸ್ 18 ವರದಿಗಾರ ಸಂದೀಪ್ ಅವರಿಗೆ ಗಂಭೀರವಾಗಿ ಗಾಯಗೊಂಡಿದ್ದು ಪ್ರಜಾ ಟಿವಿ ವರದಿಗಾರ ಜಯಂತ್, ನಾಗರಾಜ್ ಮತ್ತು ಸುದರ್ಶನ್ ರವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.ಗಾಯಗೊಂಡವರೆಲ್ಲರೂ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಸಕಲೇಶಪುರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.