ಪತ್ರಕರ್ತ ಅಕ್ಬರ್ ಜುನೈದ್ ಗೆ ಮಾತೃವಿಯೋಗ
ಸಕಲೇಶಪುರ : ಪಟ್ಟಣದ ಮಹೇಶ್ವರನಗರ ಬಡಾವಣೆಯ ನಿವಾಸಿ ಹಾಗೂ ಮೀನು ವ್ಯಾಪಾರಿ ಮೊಹಮ್ಮದ್ ಹಾಜಿ ( ಮೋನು ಕಾಕಾ ) ಇವರ ಧರ್ಮಪತ್ನಿ ಆಲೀಮಾ (70) ರವರು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಪಟ್ಟಣದ ಮಹೇಶ್ವರಿ ನಗರದ ಸ್ವಗೃಹದಲ್ಲಿ ಮಧ್ಯಾಹ್ನ 1 ಗಂಟೆ ನಂತರ ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಲಭ್ಯವಿದ್ದು ಸಂಜೆಯ ವೇಳೆ ಪಟ್ಟಣದ ಕುಶಾಲ ನಗರ ಬಡಾವಣೆಯಲ್ಲಿರುವ ಕಬರ್ ಸ್ಥಾನದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ. ಮೃತರು ತಮ್ಮ ಪತಿ ಹಾಗೂ ಒಟ್ಟು ಏಳು ಜನ ಗಂಡು ಮಕ್ಕಳು ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ