Sunday, November 24, 2024
Homeಸುದ್ದಿಗಳುಸಕಲೇಶಪುರಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ

ಸಕಲೇಶಪುರ : ಕಾಂಗ್ರೆಸ್‌ ಪಕ್ಷದಲ್ಲಿ ಅಲ್ಪ ಸಂಖ್ಯಾತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ಬೇಸತ್ತು ನೂರಾರು ಅಲ್ಪ ಸಂಖ್ಯಾತ ಮುಖಂಡರು ಜೆಡಿಎಸ್‌ ಸೇರ್ಪಡೆ ಆಗಿದ್ದಾರೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಸುಪ್ರದೀಪ್ತ್ ಯಜಮಾನ್ ಹೇಳಿದರು.

ಪಟ್ಟಣದ ಅಚಂಗಿ ಬಡಾವಣೆಯಲ್ಲಿ ನಡೆದ ಸೇರ್ಪಡೆ ಕಾರ್ಯಲ್ರಮದಲ್ಲಿ ಮಾತನಾಡಿ, ಹಾಸನ ಜಿಲ್ಲೆಯು ಶಾಂತಿಯುತವಾಗಿಯೂ ಇಲ್ಲಿಯ ಜನರು ಸೌಹಾರ್ದತೆಯಿಂದ ಕೂಡಿ ಬಾಳುತ್ತಿದ್ದಾರೆ ಇಂಥಹ ಸಂದರ್ಭದಲ್ಲಿ ಚಿಕ್ಕಮಗಳೂರಿನ ಶಾಸಕ ಸಿಟಿ ರವಿ ಅವರು ಯುಪಿ ಮಾದರಿಯ ಬುಲ್ಡೆಜರ್ ಕುರಿತು ಮಾತನಾಡಿರುವುದು ಬಹಳ ಬೇಸರದ ಸಂಗತಿ ಇದು ದೇವೇಗೌಡರ ಕ್ಷೇತ್ರ ಗಂಡದೆಯ ಜನರು ಇಲ್ಲಿದ್ದಾರೆ. ಈ ರೀತಿಯಾದಂತಹ ಉದ್ರೇಕಕಾರಿ ಮಾತುಗಳನ್ನು ತಮ್ಮ ಕ್ಷೇತ್ರವಾದ ಚಿಕ್ಕ ಮಗಳೂರಿಗೆ ಸೀಮಿತಗೊಳಿಸಬೇಕು ಮುಂದಿನ ದಿನಗಳಲ್ಲಿ ಈ ರೀತಿಯಾದಂತಹ ಪ್ರಚೋದನಕಾರಿ ಭಾಷಣಗಳನ್ನು ಮಾಡಿದರೆ ತಕ್ಕ ಉತ್ತರವನ್ನು ನೀಡಲಾಗುವುದು ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್‌ಗೆ ಬೆಂಬಲಿಸುವಂತೆ ಆಗಬೇಕು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಧಿಕಾರಾವಧಿಯಲ್ಲಿ ಅಲ್ಪಸಂಖ್ಯಾತರಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದರು ಎಂದು ಹೇಳಿದರು.
ಪಕ್ಷದ ಸಿದ್ದಾಂತವನ್ನು ಮೆಚ್ಚಿ ನೂರಾರು ಜನರು ಪಕ್ಷ ಸೇರಿದ್ದಾರೆ ಮುಂದಿನ ದಿನಗಳಲ್ಲಿ ಪಕ್ಷ ಸೇರಿದವರೊಂದಿಗೆ ಗೌರವಯುತವಾಗಿ ನಡೆದು ಕೊಳ್ಳುತ್ತೇವೆ ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಯಾದಗಾರ್ ಇಬ್ರಾಹಿಂ ಮಾತನಾಡಿ ಜೆಡಿಎಸ್ ಪಕ್ಷವು ಎಲ್ಲಾ ಧರ್ಮದ ಎಲ್ಲಾ ವರ್ಗದ ಜನರೊಂದಿಗೆ ಸೌಹಾರ್ದತವಾಗಿ ಹಾಗೂ ಸಾಮಾಜಿಕ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿದೆ ಇಂದು ಧರ್ಮ ಧರ್ಮದ ನಡುವೆ ಸಂಘರ್ಷಗಳು ನಡೆಯುತ್ತಿರುವ ಸಂದರ್ಭದಲ್ಲಿ ಜೆಡಿಎಸ್ ಇರುವ ಕ್ಷೇತ್ರದಲ್ಲಿ ಮಾತ್ರ ಎಲ್ಲಾ ಜನರು ಶಾಂತಿಯುತವಾಗಿ ಬದುಕುತ್ತಿದ್ದಾರೆ ಇದಕ್ಕೆ ಮೂಲ ಕಾರಣ ದೇವೇಗೌಡರು ಮಾಜಿ ಪ್ರಧಾನಿ ದೇವೇಗೌಡರು ಎಂದರು ಮಾಜಿ ಪ್ರಧಾನಿಯವರ ಪ್ರಭಾವ ರಾಜ್ಯ ಹಾಗೂ ದೇಶದಲ್ಲಿ ಎಲ್ಲೆಲ್ಲಿ ಇದೆಯೋ ಆ ಪ್ರದೇಶದಲ್ಲಿ ಜನರು ಸಹೋದರತೆಯಿಂದ ಬದುಕುತ್ತಿದ್ದಾರೆ ಎಂದು ಹೇಳಿದರು ಮೇ ಹತ್ತರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳು ಹರಿದು ಹಂಚಿ ಹೋಗದೆ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕರೀಂ ಆಚಂಗಿ, ಕಾರ್ಮಿಕ ಘಟಕದ ಯೂನಸ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂಚಲಕುಮಾರ ಸ್ವಾಮಿ ಹಲಸುಲಿಗೆ ಮಳಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸತೀಶ್ ಪಕ್ಷದ ಮುಖಂಡರಾದ ಸಚಿನ್ ಪ್ರಸಾದ್ ಬೆಕ್ಕಿನಲ್ಲಿ ನಾಗರಾಜ್ ಸಬ ಭಾಸ್ಕರ್ ಸೇರಿದಂತೆ ಇತರರು ಇದ್ದರು

RELATED ARTICLES
- Advertisment -spot_img

Most Popular