Monday, April 21, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ :ವೈಯುಕ್ತಿಕ ಗಲಾಟೆಗೆ ರಾಜಕೀಯ ಬಣ್ಣ ಜೆಡಿಎಸ್ ಮುಖಂಡರ ಆರೋಪ. ಬಾಳ್ಳುಪೇಟೆ ಹಸುಗವಳ್ಳಿ ವ್ಯಕ್ತಿಗಳಿಬ್ಬರ...

ಸಕಲೇಶಪುರ :ವೈಯುಕ್ತಿಕ ಗಲಾಟೆಗೆ ರಾಜಕೀಯ ಬಣ್ಣ ಜೆಡಿಎಸ್ ಮುಖಂಡರ ಆರೋಪ. ಬಾಳ್ಳುಪೇಟೆ ಹಸುಗವಳ್ಳಿ ವ್ಯಕ್ತಿಗಳಿಬ್ಬರ ಗಲಾಟೆ ಪ್ರಕರಣಕ್ಕೂ ಜೆಡಿಎಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ.

ಸಕಲೇಶಪುರ :ತಾಲೂಕಿನ ಬಾಳ್ಳುಪೇಟೆ ಸಮೀಪದ ಹಸುಗವಳ್ಳಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದ ಗಲಾಟೆ ಪ್ರಕರಣ ರಾಜಕೀಯ ತಿರುವು ಪಡೆದಿದ್ದು ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಜೆಡಿಎಸ್ ಪಕ್ಷದ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಹಸುಗವಳ್ಳಿ ಗ್ರಾಮದ ಗುರು ಎಂಬಾತನ ಮೇಲೆ ಅದೇ ಗ್ರಾಮದ ರಮೇಶ್ ಎಂಬಾತ ಕ್ಷುಲಕ ಕಾರಣಕ್ಕೆ ಗುರು ಕೈಯನ್ನು ಕಡಿದಿದ್ದು ಗುರು ಸದ್ಯ ಹಾಸನದ ಖಾಸಗಿ ಆಸ್ಪತ್ರೆಯೊಂದರ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಸಂಬಂಧ ವಾಸ್ತವ ನ್ಯೂಸ್ ಬ್ರೇಕ್ ಮಾಡಿದ್ದರಿಂದ ಜೆಡಿಎಸ್ ಮುಖಂಡ ಮಾಜಿ ಗ್ರಾ.ಪಂ ಅಧ್ಯಕ್ಷ ಪಾಲಾಕ್ಷ ಮಾತನಾಡಿ ಈ ಗಲಾಟೆಯಲ್ಲಿ ರಾಜಕೀಯ ವೈಷಮ್ಯವಿಲ್ಲ ಅವರಿಬ್ಬರ ವೈಯುಕ್ತಿಕ ವಿಚಾರಗಳಿಗೆ ಗಲಾಟೆ ನಡೆದಿದೆ. ಗಲಾಟೆ ನಡೆದು ಮೂರು ದಿನದ ನಂತರ ಪ್ರಕರಣ ಹೊರ ಬಂದಿದ್ದು,ಒಂದು ವೇಳೆ ರಮೇಶ್ ತಪ್ಪು ಮಾಡಿದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿ ಆದರೆ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಪಕ್ಷದ ಮೇಲೆ ಗೂಬೆಕೂರಿಸುವ ಕೆಲಸ ಮಾಡಬಾರದು ಎಂದು ಹೇಳಿದ್ದಾರೆ.

ಜೆಡಿಎಸ್ ಪಕ್ಷ ಶಾಂತಿಯುತವಾಗಿ ರಾಜಕೀಯ ಮಾಡಿಕೊಂಡು ಬಂದಿದೆ. ತಾಲೂಕಿನಲ್ಲಿ ಇದುವರೆಗೂ ಯಾವುದೇ ಘರ್ಷಣೆ ಅವಕಾಶ ಮಾಡಿಕೊಟ್ಟಿಲ್ಲ.ಸೌಜನ್ಯಯುತವಾಗಿ ನಡೆದುಕೊಂಡಿರುವಂತಹ ಜೆಡಿಎಸ್ ಪಕ್ಷಕ್ಕೆ ಕೆಟ್ಟ ಹೆಸರು ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಯುವ ಜೆಡಿಎಸ್ ಮುಖಂಡ ಉದೀಶ್ ಅಸಮಾಧಾನ ಹೊರಹಾಕಿದ್ದಾರೆ.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ಎಂ ಸ್ವಾಮಿ ವಾಸ್ತವ ನ್ಯೂಸ್ ನೊಂದಿಗೆ ಮಾತನಾಡಿ, ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಕಟ್ಟಿರುವುದು ಹಾಸ್ಯಾಸ್ಪದವಾಗಿದೆ. ವಾಸ್ತವ ವಿಚಾರ ಬೇರೆ ಇದೆ. ಇದು ಗ್ರಾಮಸ್ಥರಿಗೂ ತಿಳಿದಿದೆ ಆದರೆ ಕೆಲವರು ಜೆಡಿಎಸ್ ಪಕ್ಷಕ್ಕೆ ಕೆಟ್ಟ ಹೆಸರು ತರುವುದಕ್ಕೆ ರಾಜಕೀಯ ಬಣ್ಣ ಹಚ್ಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾಸ್ತವ ನ್ಯೂಸ್ ಯಾರ ಪರವು ಯಾರ ವಿರೋಧವೂ ಇಲ್ಲ ಅಗತ್ಯ ದಾಖಲಾತಿಗಳೊಂದಿಗೆ ಹೇಳಿಕೆ ನೀಡಿದವರ ಸುದ್ದಿಯನ್ನು ಪ್ರಾಮಾಣಿಕವಾಗಿ ಪ್ರಕಟಿಸುತ್ತೇವೆ.

RELATED ARTICLES
- Advertisment -spot_img

Most Popular