Sunday, November 24, 2024
Homeಸುದ್ದಿಗಳುಸಕಲೇಶಪುರತಾಲೂಕು ಜಾನಪದ ಪರಿಷತ್ತು ಘಟಕದ ಉದ್ಘಾಟನೆ

ತಾಲೂಕು ಜಾನಪದ ಪರಿಷತ್ತು ಘಟಕದ ಉದ್ಘಾಟನೆ

ಸಕಲೇಶಪುರ: ಸಕಲೇಶಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ತಾಲೂಕು ಜಾನಪದ ಪರಿಷತ್ತು ಘಟಕದ ಉದ್ಘಾಟನೆ, ಪದಾಧಿಕಾರಿಗಳ ಪದವಿ ಸ್ವೀಕಾರ ಮತ್ತು ಜಾನಪದ ಗೀತಗಾಯನ ಕಾರ್ಯಕ್ರಮವನ್ನು ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸ್ವಾಗತವನ್ನು ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಅಶೋಕ್ ಕೋರಿದರು. ಡಾ.ಹಂಪನಹಳ್ಳಿ ತಿಮ್ಮೇಗೌಡರು, ಅದ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕ, ಹಾಸನ ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಜಾನಪದಕ್ಕೆ ಅಂತ್ಯವಿಲ್ಲ. ಸುಗ್ಗಿ ಕುಣಿತ ಸಕಲೇಶಪುರದ ಒಂದು ಸಂಸ್ಕೃತಿಯ ಭಾಗ ಅದು ಕೂಡ ಜಾನಪದ ಕಲೆ ಎಂದರು .

. ಬಿ. ಎ. ಜಗನ್ನಾಥ್, ಕಾಫಿ ಬೆಳೆಗಾರರು ಹಾಗೂ ರಾಜಕೀಯ ಮುಖಂಡರು, ಬಾಳ್ಳುಪೇಟೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡುತ್ತಾ ಕಾಂತಾರ ಸಿನೆಮಾದ ಪಂಜುರ್ಲಿ ನೃತ್ಯದ ಬಗ್ಗೆ ಪ್ರಸ್ತಾಪಿಸಿ…. ಈ ಸಿನಿಮಾ ಅಂತಾರಾಷ್ಟ್ರೀಯ ಮನ್ನಣೆ ಪಡೆಯಲು ಈ ಜಾನಪದ ನೃತ್ಯವೇ ಕಾರಣವೆಂದರು. ಹಾಗೆಯೇ ಹಿಂದೆ ಹಬ್ಬ-ಹರಿದಿನಗಳಲ್ಲಿ ಬರುತ್ತಿದ್ದ “ದಾಸಯ್ಯ”ರು ಈಗ ಕಾಣ ಸಿಗುವುದಿಲ್ಲ. ಗದ್ದೆನಾಟಿ ಮಾಡುವಾಗ ಹಿಂದೆಲ್ಲಾ ಜಾನಪದ ಹಾಡು ಹೇಳಿಕೊಂಡು ಕೆಲಸ ಮಾಡುತ್ತಿದ್ದರು. ಅದು ಈಗ ಕಾಣೆಯಾಗಿದೆ. ನಾವು ಕಲೆಗೆ ಪ್ರೋತ್ಸಾಹ ಕೊಟ್ಟರೆ ಅದು ಎಂದಿಗೂ ನಾಶವಾಗುವುದಿಲ್ಲ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿಗಳಾದ ಮೇಟಿಕೆರೆ ಹಿರಿಯಣ್ಣನವರು ಮಾತನಾಡಿ ಸಕಲೇಶಪುರ ತಾಲೂಕು ಜಾನಪದ ಕಲೆ ಸಾಹಿತ್ಯ ಸಂಸ್ಕತಿಯಲ್ಲಿ ಅತ್ಯಂತ ಶ್ರೀಮಂತವಾಗಿದೆ. ಸುಗ್ಗಿ ಕುಣಿತವೇ ಇದಕ್ಕೆ ಸಾಕ್ಷಿ ಎಂದರು. ಮುಖ್ಯ ಅತಿಥಿಗಳಾದ ಚೆನ್ನವೇಣಿ ಎಂ ಶೆಟ್ಟಿಯವರು ಜಾನಪದ ಸಂಗೀತದ ಭಾಗವಾದ ಒಂದು ತುಳು ಹಾಡನ್ನು ಹಾಡಿದರು. ಕುಮಾರ್ ಕಟ್ಟೆ ಬೆಳಗುಲಿ ಮತ್ತು ಸಂತೋಷ ಡಿಂಡಗೂರು ಇವರುಗಳು ಜಾನಪದ ಗೀತೆಗಳನ್ನು ಹಾಡಿದರು.

ಪ್ರಸಾದ್ ರಕ್ಷಿದಿ ರವರು ಮಾತನಾಡಿ ಜಾನಪದ ನಮ್ಮೇಲ್ಲರ ತಾಯಿ ಜಾನಪದ ಚೆನ್ನಾಗಿದ್ದರೆ ಸಂಸ್ಕೃತಿ ಚೆನ್ನಾಗಿರುತ್ತೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಹರೀಶ್ ಎಂ. ಕೆ ವಹಿಸಿಕೊಂಡಿದ್ದರು.

ತಾಲೂಕು ಜಾನಪದ ಪರಿಷತ್ತಿನ ಘಟಕದ ನೂತನ ಅಧ್ಯಕ್ಷರಾಗಿ ಆನಂದ್ ಕುಮಾರ್ ,ಗೌರವ ಅದ್ಯಕ್ಷರಾಗಿ ಪ್ರಸಾದ್ ರಕ್ಷಿದಿ, ಕಾರ್ಯದರ್ಶಿಗಳಾಗಿ ಶೃತಿ ರಂಜನ್, ಗೌರವ ಸಲಹೆಗಾರರಾಗಿ ಕಳಲೆ ಕೃಷ್ಣೇಗೌಡರು, ಸದಸ್ಯರಾಗಿ . ಕೆ. ಬಿ ಗಂಧಾಧರ, ಎಚ್. ಎನ್. ಹೇಮಂತ್ ಕುಮಾರ್ ಪದಾಧಿಕಾರ ಸ್ವೀಕರಿಸಿದರು.

RELATED ARTICLES
- Advertisment -spot_img

Most Popular