ಸಕಲೇಶಪುರ:ಜಾತ್ರೆ ಮೈದಾನದಲ್ಲಿ ಪುರಸಭಾ ವತಿಯಿಂದ ಹಾಕಲಾಗಿರುವ ಕಸವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡುವವರೆಗೂ ನಿರಂತರ ಹೋರಾಟ ಮಾಡಲಾಗುತ್ತದೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ಹೇಳಿದರು.
ಪಟ್ಟಣದ ಸುಭಾಷ್ ಮೈದಾನದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣ, ಕರವೇ ಸ್ವಾಭಿಮಾನಿ ಸೇನೆ ವತಿಯಿಂದ ಪಟ್ಟಣದ ಸುಭಾಷ್ ಮೈದಾನದಲ್ಲಿ ನಡೆಯುತ್ತಿರುವ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ ಪುರಸಭೆ ವತಿಯಿಂದ ಜಾತ್ರ ಮೈದಾನದಲ್ಲಿ ಸಂಪೂರ್ಣವಾಗಿ ಕಸ ವಿಲೇವಾರಿ ಮಾಡಿ ಜಾತ್ರೆ ಟೆಂಡರ್ ಕರೆಯಬೇಕು ಎಂದು ಹಲವು ಬಾರಿ ಪುರಸಭೆಗೆ ಸಂಘಟನೆ ವತಿಯಿಂದ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಕಸದ ನಡುವೆಯೆ ಜಾತ್ರೆ ಮಾಡುತ್ತಿರುವುದು ಖಂಡನೀಯ ಕೂಡಲೆ ಇಲ್ಲಿ ಹಾಕಿರುವ ಎಲ್ಲಾ ಕಸವನ್ನು ತೆಗೆಯಲು ಪುರಸಭೆಯವರು ಕ್ರಮ ಕೈಗೊಳ್ಳಬೇಕು,ಇಲ್ಲದಿದ್ದಲ್ಲಿ ಪ್ರತಿಭಟನೆಯನ್ನು ನಿರಂತರವಾಗಿ ಮಾಡಲಾಗುವುದು ಎಂದರು.
ಕರವೇ ಸ್ವಾಭಿಮಾನಿ ಸೇನೆಯ ತಾಲೂಕು ಅಧ್ಯಕ್ಷ ಜಾನೆಕೆರೆ ಸಾಗರ್ ಮಾತನಾಡಿ ಕಸ ವಿಲೇವಾರಿ ಮಾಡುತ್ತೇವೆಂದು ಹೇಳಿ ಪುರಸಭೆಯವರು ಸುಮಾರು 16
ಲಕ್ಷ ರೂಗಳಿಗೆ ಗುತ್ತಿಗೆ ಕರೆದು ಸ್ವಲ್ಪ ಮಾತ್ರ ಕಸ ವಿಲೇವಾರಿ ಮಾಡಿ ಕಸ ವಿಲೇವಾರಿ ಹೆಸರಿನಲ್ಲಿ ಭ್ರಷ್ಟಾಚಾರ ವೆಸಗಲಾಗಿದೆ.ಜಾತ್ರೆಗೆ ಬರುವ ಜನ ಕಸದ ರಾಶಿಯಲ್ಲಿ ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ. ಇದರಿಂದ ಜನರ ಆರೋಗ್ಯದ ಮೇಲೆ ನೇರವಾಗಿ ದುಷ್ಪರಿಣಾಮ ಬೀಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸಂಪೂರ್ಣವಾಗಿ ಕಸ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂಧರ್ಭದಲ್ಲಿ ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ನದೀಮ್, ಚೇತನ್ ಮುಂತಾದವರು ಹಾಜರಿದ್ದರು.
ತಾಜಾ ಸುದ್ದಿ