ರವಿ ಚನ್ನಣ್ಣವರ್ ಸೇರಿದಂತೆ ಹಿರಿಯ ಐಪಿಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ
11 IPS officers transferred
ರವಿ ಡಿ. ಚನ್ನಣ್ಣವರ್ , ರಮಣ ಗುಪ್ತಾ, ರವಿಕಾಂತೆಗೌಡ ಸೇರಿದಂತೆ 11 ಹಿರಿಯ ಐಪಿಎಸ್ ಅಧಿಕಾರಿಗಳನ್ನು ಸರಕಾರ ಹಠಾತ್ ವರ್ಗಾವಣೆ ಮಾಡಿದೆ. ರವಿ ಡಿ. ಚನ್ನಣ್ಣವರ್ ಅವರನ್ನು ಕಿಯೋನಿಕ್ಸ್ ಎಂ. ಡಿ. ಹುದ್ದೆಗೆ ನಿಯೋಜಿಸಲಾಗಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ 11 ಮಂದಿ ಐಪಿಎಸ್ ಅಧಿಕಾರಿಗಳು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಪೈಕಿ ಏಳು ಅಧಿಕಾರಿಗಳು ವರ್ಗಾವಣೆಯಾದರೆ, ನಾಲ್ಕು ಅಧಿಕಾರಿಗಳು ಮುಂಬಡ್ತಿ ಪಡೆದಿದ್ದಾರೆ.ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ವರ್ಗಾವಣೆಯಾಗಿದ್ದು, ಈ ಜಾಗಕ್ಕೆ ಬಿ.ರಮೇಶ್ ಮೈಸೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ನೇಮಕವಾಗಿದ್ದಾರೆ.ಇದರ ಜೊತೆಗೆ ಇದೇ ಮೊದಲ ಬಾರಿಗೆ ಬೆಂಗಳೂರು ನಗರಕ್ಕೆ ವಿಶೇಷ ಆಯುಕ್ತ ಹುದ್ದೆ ಸೃಷ್ಟಿಸಿ, ಅಬ್ದುಲ್ ಸಲೀಂ ಅವರನ್ನು ಆ ಹುದ್ದೆಗೆ ನೇಮಿಸಲಾಗಿದೆ.ವರ್ಗಾವಣೆ ಮತ್ತು ಬಡ್ತಿ ಪಡೆದ ಅಧಿಕಾರಿಗಳು:
ಅಬ್ದುಲ್ ಸಲೀಂ – ಎಡಿಜಿಪಿ, ವಿಶೇಷ ಆಯುಕ್ತ, ಬೆಂಗಳೂರು ನಗರ ಟ್ರಾಫಿಕ್‌ಉಮೇಶ್ ಕುಮಾರ್ – ಆಡಳಿತ ವಿಭಾಗ, ಎಡಿಜಿಪಿ, ಬೆಂಗಳೂರು ಕೇಂದ್ರ ಕಚೇರಿ ದೇವಜ್ಯೋತಿ ರೈ – ಐಜಿಪಿ, ಮಾನವ ಹಕ್ಕು ಆಯೋಗರಮಣ ಗುಪ್ತಾ – ಐಜಿಪಿ, ಗುಪ್ತಚರ, ಬೆಂಗಳೂರು ನಗರ ಡಾ.ಬಿ.ಆರ್.ರವಿಕಾಂತೇಗೌಡ – ಡಿಐಜಿ, ಸಿಐಡಿಬಿ.ಎಸ್.ಲೋಕೇಶ್ ಕುಮಾರ್ – ಡಿಐಜಿ, ಬಳ್ಳಾರಿ ವಲಯಚಂದ್ರಗುಪ್ತ – ಡಿಐಜಿ, ಮಂಗಳೂರು ಪಶ್ಚಿಮ ವಲಯಬಡ್ತಿ ಪಡೆದ ಅಧಿಕಾರಿಗಳು: ಡಾ.ಶರಣಪ್ಪ – ಡಿಐಜಿ, ಸಿಸಿಬಿ ಬೆಂಗಳೂರುಡಾ.ಎಂ.ಎನ್.ಅನುಚೇತ್ – ಡಿಐಜಿ, ಬೆಂಗಳೂರು ಟ್ರಾಫಿಕ್ ಕಮಿಷನರ್ ರವಿ ಡಿ ಚೆನ್ನಣ್ಣನವರ್ – ವ್ಯವಸ್ಥಾಪಕ ನಿರ್ದೇಶಕ, ಕಿಯೋನಿಕ್ಸ್ಬಿ.ರಮೇಶ್ – ಮಂಗಳೂರು ಕಮಿಷನರ್ ಆಗಿ ಮುಂಬಡ್ತಿ ಪಡೆದಿದ್ದಾರೆ.