ನಿಂತಿದ್ದ ಬುಲೆರೋ ಜೀಪಿಗೆ ಇನೋವಾ ಕಾರ್ ಡಿಕ್ಕಿ : ಇಬ್ಬರ ಸ್ಥಿತಿ ಗಂಭೀರ
ಸಕಲೇಶಪುರ : ರಸ್ತೆ ಬದಿ ನಿಲ್ಲಿಸಿದ್ದ ಬುಲೆರೋ ಜೀಪಿಗೆ ಇನೋವಾ ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಡೆದಿದೆ.
ತಾಲೂಕಿನ ಬಾಳ್ಳುಪೇಟೆ ಸಮೀಪದ ನಿಡನೂರು ಕೂಡಿಗೆಯ ನಾಯರ್ ಪೆಟ್ರೋಲ್ ಬಂಕ್ ಮುಂಭಾಗ ರಸ್ತೆಯ ಎಡ ಬದಿ ನಿಲ್ಲಿಸಿದ್ದ ಬುಲೆರೋ ಜೀಪಿನ ಮಾಲೀಕ ಹನುಮಂತ(50)ಹಾಗೂ ಚಿದಾನಂದ(32) ಗಂಭೀರವಾಗಿ ಗಾಯಗೊಂಡಿರುವ ದುರ್ದೈವಿಗಳಾಗಿದ್ದಾರೆ.ಧರ್ಮಸ್ಥಳದಿಂದ ಮಂಜುನಾಥನ ದರ್ಶನ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ಇನೋವಾ ಕಾರು. ಗಾಯಳು ಹನುಮಂತ ಜೆಸಿಬಿ ಮಾಲೀಕನಾಗಿದ್ದು ರಸ್ತೆ ಬದಿಯಲ್ಲಿದ್ದ ಕ್ಯಾಟೀನ್ ನಲ್ಲಿ ಟೀ ಕುಡಿದು ಜೀಪ್ ಹತ್ತಿ ಹೋಗುವಷ್ಟರಲ್ಲಿ ಇಂದಿನಿಂದ ವೇಗವಾಗಿ ಬಂದ ಇನೋವಾ ಕಾರು ನೇರವಾಗಿ ಜೀಪ್ ಹಾಗೂ ಹನುಮಂತನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಬಸಕ್ಕೆ ಬುಲೆರೋ ವಾಹನ ಮಗುಚಿ ಬಿದ್ದಿದೆ. ಎರಡು ವಾಹನಗಳು ರಸ್ತೆ ಬದಿಯಿಂದ ಆಚೆ ಚಲಿಸಿ ಗುಂಡಿಯಲ್ಲಿ ಬಿದ್ದಿವೆ. ಇನೋವಾ ಕಾರಿನಲ್ಲಿ ಒಟ್ಟು ಇಬ್ಬರು ಮಹಿಳೆಯರು ಸೇರಿ ಐದು ಜನ ಪ್ರಯಾಣಿಸುತ್ತಿದ್ದು ಇಬ್ಬರು ಮಹಿಳೆಯರಿಗೆ ಗಾಯಗಳಾಗಿವೆ. ಗಾಯಗೊಂಡಿರುವವರನ್ನು ತುರ್ತು ಚಿಕಿತ್ಸ ವಾಹನದ ಮೂಲಕ ಹಾಸನದ ಆಸ್ಪತ್ರೆಗೆ ಕಳಿಸಿಕೊಡಲಾಗಿದ್ದು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.