Wednesday, April 16, 2025
Homeಕ್ರೈಮ್ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಕೂಲಿ ಕಾರ್ಮಿಕ ಸಾವು.

ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಕೂಲಿ ಕಾರ್ಮಿಕ ಸಾವು.

ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಕೂಲಿ ಕಾರ್ಮಿಕ ಸಾವು.

ಬೇಲೂರು ತಾಲೂಕು ಅಂಕಿಹಳ್ಳಿ ಸಮೀಪ ಕಾಡಾನೆ ದಾಳಿ ನೆಡೆಸಿತ್ತು.

ಪಶ್ಚಿಮ ಬಂಗಾಳ ಮೂಲದ ಗಾರೆ ಕೆಲಸದ ಕಾರ್ಮಿಕ ದೀಪಕ್ ರಾಯ್ ಸಾವು.

ಸಕಲೇಶಪುರ :- ಒಂಟಿ ಕಾಡನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಕೂಲಿ ಕಾರ್ಮಿಕ ದೀಪಕ್ ರಾಯ್ (54) ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ.

ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿ ಅಂಕಿಹಳ್ಳಿ ಸಮೀಪ ಗಾರೆ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಮೂಲದ ಕಾರ್ಮಿಕ ದೀಪಕ್ ರಾಯ್ ಬಿನ್ ಪ್ರಫುಲ್ ರಾಯ್ ಕೆಲಸ ಮುಗಿಸಿದ ನಂತರ ದಿನಸಿ ವಸ್ತುಗಳನ್ನು ಖರೀದಿಸಲು ಅಂಗಡಿಗೆ ತೆರಳುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿತ್ತು. ದಾಳಿಯ ನಂತರ ಜೊತೆಗಿದ್ದವರ ನೆರವಿನಿಂದ ಚಿಕಿತ್ಸೆಗಾಗಿ ಬೆಳಗೋಡು ಸಮೀಪದವರೆಗೂ ಬಂದ ನಂತರ ಖಾಸಗಿ ಆಂಬುಲೆನ್ಸ್ ಮೂಲಕ ಸಕಲೇಶಪುರದ ಕ್ರಾಪರ್ಡ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತರಲಾಗಿತ್ತು. ಆದರೆ ಗಾಯಗೊಂಡ ಕಾರ್ಮಿಕನ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ ವೈದ್ಯರು ಚಿಕಿತ್ಸೆ ನೀಡುವ ಮೊದಲೇ ಕಾರ್ಮಿಕ ಸಾವನ್ನಪ್ಪಿದ್ದಾರೆ.

RELATED ARTICLES
- Advertisment -spot_img

Most Popular