Wednesday, January 7, 2026
Homeಸುದ್ದಿಗಳುಬನವಾಸೆ ಗ್ರಾಮದ ಬಸ್ ತಂಗುದಾಣ ಉದ್ಘಾಟನೆ

ಬನವಾಸೆ ಗ್ರಾಮದ ಬಸ್ ತಂಗುದಾಣ ಉದ್ಘಾಟನೆ

ಬನವಾಸೆ ಗ್ರಾಮದ ಬಸ್ ತಂಗುದಾಣ ಉದ್ಘಾಟನೆ

ಕಟ್ಟಾಯ : ಕಾರ್ಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನವಾಸಸೆ ಗ್ರಾಮದಲ್ಲಿ ನೂತನ ಬಸ್ ತಂಗುದಾಣವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು.

 ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಂತೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಡಿ ಬಸ್ ನಿಲ್ದಾಣ ನಿರ್ಮಿಸಿ ಮಂಗಳವಾರ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಯಿತು.

ನಂತರ ಮಾತನಾಡಿದ ಅವರು,ಶಾಲಾ, ಕಾಲೇಜು ವಿದ್ಯಾರ್ಥಿಗಳು,ಇತರ ತೋಟಗಳಿಗೆ ತೆರಳುವ ಕಾರ್ಮಿಕರು ರಸ್ತೆಯ ಬದಿಯಲ್ಲಿ ಬಿಸಿಲು, ಮಳೆಯಲ್ಲಿ ನಿಂತು ವಾಹನ ಕಾಯಬೇಕಾದ ಪರಿಸ್ಥಿತಿ ಇತ್ತು

ಈ ಭಾಗದಲ್ಲಿ ಉತ್ತಮ ರೀತಿಯ ನೂತನ ತಂಗುದಾಣ ಸಾರ್ವಜನಿಕರ ಬಳಕೆಗೆ ನಿರ್ಮಾಣ ಮಾಡಲಾಗಿದ್ದು. ಅನುಕೂಲವಾಗಲಿದೆ.ಜನಸಾಮಾನ್ಯರಿಗೆ ಮೂಲ ಸೌಕರ‌್ಯವನ್ನು ಕಲ್ಪಿಸುವುದು ನಮ್ಮ ಕರ್ತವ್ಯ. ಈಭಾಗದಲ್ಲಿ ಉತ್ತಮ ರೀತಿಯ ನೂತನ ತಂಗುದಾಣ ಸಾರ್ವಜನಿಕರ ಬಳಕೆಗೆ ನೀಡಿದ್ದು, ಇದರ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಗ್ರಾ.ಪಂ ಸದಸ್ಯ ರಮೇಶ್, ತೇಜೋದಯ ವೃದ್ದ ಆಶ್ರಮ ಸಂಸ್ಥಾಪಕ ಗಿರಿತೇಜ, ಮುಖಂಡರಾದ ರಾಜಣ್ಣ,ಹರೀಶ್,, ನಿತಿನ್ ಉಡುವಾರೆ, ಪ್ರದೀಪ್ ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular