Sunday, November 24, 2024
Homeಸುದ್ದಿಗಳುಸಕಲೇಶಪುರಸನಾತನ ಸೇವಾ ಟ್ರಸ್ಟ್ ಉದ್ಘಾಟನೆ : ಸೇವೆಗೆ ಧರ್ಮಸ್ಥಳ ಮಾದರಿ: ಶಾಸಕ ಹುಲ್ಲಹಳ್ಳಿ ಸುರೇಶ್

ಸನಾತನ ಸೇವಾ ಟ್ರಸ್ಟ್ ಉದ್ಘಾಟನೆ : ಸೇವೆಗೆ ಧರ್ಮಸ್ಥಳ ಮಾದರಿ: ಶಾಸಕ ಹುಲ್ಲಹಳ್ಳಿ ಸುರೇಶ್

ಸೇವೆಗೆ ಧರ್ಮಸ್ಥಳ ಮಾದರಿ: ಶಾಸಕ ಹುಲ್ಲಹಳ್ಳಿ ಸುರೇಶ್

ಸಕಲೇಶಪುರ: ಸೇವಾ ಚಟುವಟಿಕೆಗಳಿಗೆ ಧರ್ಮಸ್ಥಳ ರಾಜ್ಯದಲ್ಲೆ ಮಾದರಿಯಾಗಿದ್ದು ಅದೇ ರೀತಿ ಸನಾತನ ಟ್ರಸ್‌ಟ್ ಸಹ ಕಾರ್ಯನಿರ್ವಹಿಸಲಿ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ ಸುರೇಶ್ ಹೇಳಿದರು. 

   ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸನಾತನ ಸೇವಾ ಟ್ರಸ್‌ಟ್ನ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಸೇವೆ ಎಂಬುದು ಅತ್ಯಂತ ಪವಿತ್ರವಾದದ್ದೂ, ರಾಜಕಾರಣ ಹೊರತು ಪಡಿಸಿ ಸೇವೆ ಸಲ್ಲಿಸಿದರೆ ಆಗ ಸೇವೆಗೆ ನಿಜವಾದ ಅರ್ಥಬರುತ್ತದೆ.ಧರ್ಮಸ್ಥಳ ಸೇವಾ ಸಂಸ್ಥೆಯು ರಾಜ್ಯದಲ್ಲೆ ಮಾದರಿ ಸಂಸ್ಥೆಯಾಗಿದ್ದು ಆರೋಗ್ಯ, ಶಿಕ್ಷಣ, ಮತ್ತಿತರ ಕ್ಷೇತ್ರಗಳಲ್ಲಿ  ಉತ್ತಮ ಸೇವೆ ಸಲ್ಲಿಸುತ್ತಿದೆ. ಧರ್ಮಸ್ಥಳ ಸಂಸ್ಥೆಯು ಆರಂಭವಾದಗ ಅತ್ಯಂತ ಕಷ್ಟಕರವಾಗಿತ್ತು. ಇದೀಗ ರಾಜ್ಯದೆಲ್ಲೆಡೆ ಸೇವೆಗೆ ಹೆಸರುವಾಸಿಯಾಗಿದೆ. ಇದೇ ರೀತಿಯಲ್ಲಿ ಸನಾತನ ಸೇವಾ ಟ್ರಸ್‌ಟ್ ಸಹ ಕಾರ್ಯನಿರ್ವಹಿಸಲಿ, ಒಂದು ಹೆಜ್ಜೆ ಮುಂದೆ ಇಟ್ಟಾಗ ಏನೆ ಅಡ್ಡಿಗಳು ಬಂದರು ಸಹ ಹೆಜ್ಜೆಯನ್ನು ಹಿಂದಡದೆ ಸನಾತನ ಟ್ರಸ್‌ಟ್ನ್ನು ಮಾದರಿಯಾಗಿ ಮಾಡಲು ಮುಂದಾಗಬೇಕು ಎಂದರು.

   ಸನಾತನ ಸೇವಾ ಟ್ರಸ್‌ಟ್ ಅಧ್ಯಕ್ಷ  ಮಂಜುನಾಥ್ ಸಂಗಿ ಮಾತನಾಡಿ ಸುಮಾರು ಒಂದುವರೆ ತಿಂಗಳ ಸತತ ಹೋರಾಟದಿಂದ ಇಂದು ಟ್ರಸ್‌ಟ್ನ್ನು ನಿಮ್ಮೆಲ್ಲರ ಮುಂದೆ ಅನಾವರಣ ಮಾಡಿದ್ದೇವೆ. ಹುಟ್ಟಿದ ಮನುಷ್ಯ ಸಮಾಜಕ್ಕೆ ಏನಾದರು ಕೊಡಬೇಕೆಂಬ ನಿಟ್ಟಿನಲ್ಲಿ ಸಮಾಜ ಸೇವೆಗಾಗಿ ಈ ಟ್ರಸ್‌ಟ್ ಮಾಡಿದ್ದೇವೆ. ಟ್ರಸ್‌ಟ್ ಕುರಿತು ಕೆಲವರು ನಮ್ಮ ಮೇಲೆ ಕಲ್ಲು ಎಸೆದಿದ್ದಾರೆ. ಕಲ್ಲಿಗೆ ಉಳಿಪೆಟ್ಟು ಬಿದ್ದರೆ ಶಿಲೆಯಾಗುತ್ತದೆ ಹೊರತು ವಾಪಸ್ಸು ಹೊಡೆಯುವುದಿಲ್ಲ. ನಾವು ಸಹ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದೆ ಸನಾತನ ಸಂಸ್ಕೃತಿಯ ಆಧಾರದಲ್ಲಿ  ಸೇವೆ ಸಲ್ಲಿಸುತ್ತೇವೆ ಎಂದರು. 

 

  ಸಮಾಜದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಸಮಾಜ ಸೇವಕ ಸತ್ಯನಾರಾಯಣ ಗುಪ್ತ, ನೂರಕ್ಕೂ ಹೆಚ್ಚು ಬಾರಿ ರಕ್ತ ದಾನ ಮಾಡಿರುವ ಆನಂದ್ ಲಿಯೋ ವ್ಯಾಸ್, ಪ್ರಗತಿಪರ ಕೃಷಿಕ ಮಂಜಯ್ಯ ಕಲ್ಗಣೆ, ಆಟೋ ಚಾಲಕ ರವಿಕುಮಾರ್, ಮೂಕಪ್ರಾಣಿಗಳಿಗೆ ಆಹಾರ ನೀಡುವ ಹೇಮಾವತಿ ರಮೇಶ್‌ರವರನ್ನು ಟ್ರಸ್‌ಟ್ ವತಿಯಿಂದ ಸನ್ಮಾನಿಸಲಾಯಿತು. 

    ಈ  ಸಂಧರ್ಭದಲ್ಲಿ ಮಾಜಿ ಶಾಸಕರಾದ ಎಚ್.ಕೆ ಕುಮಾರಸ್ವಾಮಿ, ಎಚ್.ಎಂ ವಿಶ್ವನಾಥ್, ಬಿ.ಆರ್ ಗುರುದೇವ್, ಕಾಂಗ್ರೆಸ್ ಮುಖಂಡರಾದ ಮುರುಳಿಮೋಹನ್ ಹಾಗೂ ವಿದ್ಯಾಶಂಕರ್, ಮಾಜಿ ತಾ.ಪಂ ಅಧ್ಯೆಕ್ಷೆ ಶ್ವೇತಾ ಪ್ರಸನ್ನ , ಟಿಎಪಿಸಿಎಮ್‌ಎಸ್ ಸದಸ್ಯ ಜಾತಹಳ್ಳಿ ಪುಟ್ಟಸ್ವಾಮಿ, ಜೇನು ಸೊಸೈಟಿ ಅಧ್ಯಕ್ಷ ದೇವರಾಜ್, ಸನಾತನ ಟ್ರಸ್‌ಟ್ನ ಲೋಹಿತ್ ಜಂಬರ್ಡಿ,ಮಹೇಶ್, ಲೋಕೇಶ್, ರಘು, ಚೇತನಾ, ಬಾಲರಾಜ್ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -spot_img

Most Popular