ಸಕಲೇಶಪುರ: ಪಶುಗಳಿಗೂ ಸಹ ಉತ್ತಮ ಚಿಕಿತ್ಸೆ ದೊರಕಬೇಕೆಂಬ ನಿಟ್ಟಿನಲ್ಲಿ ಬೆಳಗೋಡು ಹೋಬಳಿ ಕೇಂದ್ರದಲ್ಲಿ ನೂತನ ಪಶು ಆಸ್ಪತ್ರೆಯನ್ನು ತೆರೆಯಲಾಗುತ್ತಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಬೆಳಗೋಡು ಗ್ರಾಮದಲ್ಲಿ ನೂತನ ಪಶು ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಸುಮಾರು 31 ಲಕ್ಷ ರೂ ವೆಚ್ಚದಲ್ಲಿ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ಅನುದಾನದಲ್ಲಿ ಬೆಳಗೋಡಿನಲ್ಲಿ ಪಶು ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಹೊಸ ಪಶು ಆಸ್ಪತ್ರೆ ನಿರ್ಮಾಣದಿಂದ ಬೆಳಗೋಡು ಹೋಬಳಿಯ ಜನ ತಮ್ಮ ಜಾನುವಾರುಗಳನ್ನು ಚಿಕಿತ್ಸೆಗಾಗಿ ತಾಲೂಕು ಕೇಂದ್ರಕ್ಕೆ ಕರೆದುಕೊಂಡು ಹೋಗುವುದು ತಪ್ಪುತ್ತದೆ.ಜನ ಇದನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ಮಾಜಿ ಜಿ. ಸದಸ್ಯೆ ಚಂಚಲಾ ಕುಮಾರಸ್ವಾಮಿ ಲ,ತಾಲೂಕು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ್, ಗ್ರಾ.ಪಂ ಅಧ್ಯಕ್ಷೆ ಉಮಾಜಗದೀಶ್, ಉಪಾಧ್ಯಕ್ಷ ಭುವನಾಕ್ಷ, ಸದಸ್ಯರುಗಳಾದ ರುದ್ರಕುಮಾರ್, ದೊಡ್ಡೀರಯ್ಯ, ಮಂಜುಳಮ್ಮ, ಮಂಜುಳ, ಪ್ರೇಮ, ಪ್ರಕಾಶ್ ಶೆಟ್ಟಿ, ರೇಣುಕಾ,ಸಾವಿತ್ರಮ್ಮ, ಶಾರದಾ, ನಸೀಮಾ ಭಾನು, ಪುನೀತ್ ಪಿಡಿಓ ಲಕ್ಷ್ಮೀ ನರಸಯ್ಯ, ಕಾರ್ಯದರ್ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಲ್ ಸೋಮಶೇಖರ್, ತಾ.ಪಂ ಸಹಾಯಕ ನಿರ್ದೇಶಕ ಆದಿತ್ಯ ,ಎಪಿಎಂಸಿ ಮಾಜಿ ಅಧ್ಯಕ್ಷ ಕವನ್ ಗೌಡ ಮುಂತಾಧವರು ಹಾಜರಿದ್ದರು.