ಸಕಲೇಶಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಡಿಪೋದಿಂದ ಹಲವಾರು ಬಸ್ಸುಗಳು ತೆರಳಿದ ಹಿನ್ನೆಲೆಯಲ್ಲಿ ಶನಿವಾರ ಸರಿಯಾದ ಸಮಯಕ್ಕೆ ಬಸ್ಸುಗಳು ಬರದೇ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬೆಳಗ್ಗೆ ಸಕಲೇಶಪುರದಿಂದ 5:30ಕ್ಕೆ ಹೊರಡಬೇಕಾದ ಹುಬ್ಬಳ್ಳಿ ಬಸ್ ಸಹ ಭಾರತ್ ಜೋಡೋ ಯಾತ್ರೆಗೆ ತೆರಳಿದ್ದರಿಂದ ಈ ಬಸ್ಸನ್ನು ಕಾಯುತ್ತಿದ್ದ ಪ್ರಯಾಣಿಕರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಿಲ್ದಾಣದಲ್ಲೇ ಕಾಯ್ದು ನಂತರ ಬೇರೆ ಬಸ್ ಗಳಲ್ಲಿ ಹೋಗುವಂತಾಯಿತು. ದಸರಾ ಸಮಯವಾಗಿದ್ದು ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ವಿವಿಧ ಸ್ಥಳಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ಭಾರತ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಹೆಚ್ಚಿನ ಬಸ್ಸುಗಳು ಅಲ್ಲಿಗೆ ತೆರಳಿದ್ದರಿಂದ ಬಹುತೇಕ ಬಸ್ಸುಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿರುವುದು ಕಂಡುಬಂದಿತು.