660 ಚೀಲ ಪಡಿತರ ಅಕ್ಕಿ ಅಕ್ರಮ ದಾಸ್ತಾನು: ನಾಲ್ವರ ವಿರುದ್ಧ ದೂರು
ಸಕಲೇಶಪುರ: ತಾಲೂಕಿನ ಬಾಳುಪೇಟೆಯ ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯ ತೀರ್ಥಕುಮಾರ ಎಂಬುವರಿಗೆ ಸೇರಿದ ಗೋದಾಮಿನಲ್ಲಿ ಅಕ್ರಮ ವಾಗಿ 660 ಚೀಲ ಪಡಿತರ ಅಕ್ಕಿಯನ್ನು ಸಂಗ್ರಹ ಮಾಡಿದ್ದು ಬಯಲಾಗಿದೆ.
ತಾಲೂಕಿನ ಆಹಾರ ಶಿರಸ್ತೇದಾರರಾಗಿರುವ ದ್ರಾಕ್ಷಾಯಿಣಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಅಕ್ರಮ ಬೆಳಕಿಗೆ ಬಂದಿದೆ.
ನಡೆದಿದ್ದೇನು:
ಹಾಸನದ ಕೈಗಾರಿಕಾ ಪ್ರದೇಶದ 3 ಲ್ಲಿರುವ ಗೋದಾಮಿನಿಂದ 660 ಅಕ್ಕಿ ಚೀಲಗಳನ್ನು ಪ್ರಮೋದ ಕುಮಾರ ಎಂಬುವರ ರಂಗಸ್ವಾಮಿ ಟ್ರಾನ್ಸ್ ಪೋರ್ಟ್‌ಗೆ ಸೇರಿದ ಕೆಎ-19-ಸಿ-7712 ಹಾಗೂ ಕೆಎ-19-ಡಿ-9533 ನಂಬರಿನ ಎರಡು ಬುಧವಾರ ಲಾರಿಗೆ ಲೋಡ್ ಮಾಡಿ, ಅಕ್ಕಿಯನ್ನು ಸಕಲೇಶಪುರದ ಗೋದಾಮಿಗೆ ತೆಗೆದುಕೊಂಡು ಹೋಗಲು ಟ್ರಕ್ ಸೀಟ್‌ಗಳನ್ನು ನೀಡಲಾಗಿತ್ತು.
ಆದರೆ ಅಕ್ಕಿ ಚೀಲಗಳನ್ನು ಸಕಲೇಶಪುರಕ್ಕೆ ಸಾಗಿಸಬೇಕಿದ್ದ ಲಾರಿಯ ಚಾಲಕರು, ಮೋಸ ಮಾಡುವ ಉದ್ದೇಶದಿಂದ ಮಾರ್ಗ ಮಧ್ಯೆ ಅಂದರೆ ಬಾಳುಪೇಟೆಯ ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯ ಗೋದಾಮಿನಲ್ಲಿ ಅಂದು ಮಧ್ಯಾಹ್ನ ಅಕ್ರಮವಾಗಿ ದಾಸ್ತಾನು ಮಾಡಿದ್ದರು.
ಇದು ಬಯಲಾದ ನಂತರ ರಂಗನಾಥ ಟ್ರಾನ್ಸ್ ಪೋರ್ಟ್‌ನ ಪ್ರಮೋದ್ ಕುಮಾರ, ಜಮ್ಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ತೀರ್ಥಕುಮಾರ ಹಾಗೂ ಎರಡು ಲಾರಿಗಳ ಚಾಲಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ದ್ರಾಕ್ಷಾಯಿಣಿ ಅವರು ಗ್ರಾಮಾಂತರ ಠಾಣೆಗೆ ದೂರು ದಾಖಲಿಸಿಕೊಂಡಿರುವ ನೀಡಿದ್ದಾರೆ. ಪ್ರಕರಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.