ಸಕಲೇಶಪುರ : ಬದ್ರಿಯಾ ಯೂಥ್ ಸೆಂಟರ್ ಇದರ ಆಶ್ರಯದಲ್ಲಿ ಬದ್ರಿಯಾ ಜುಮಾ ಮಸೀದಿ ಆವರಣದಲ್ಲಿ ಬೃಹತ್ ಇಫ್ತಾರ್ ಸಂಗಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಯಾದ್ಗಾರ್ ಜಾಕೀರ್ ಮಾತನಾಡಿ, ಸಂಘಟನೆಗಳು ಯುವ ಸಮುದಾಯದಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸುವಲ್ಲಿ ಮುಂಚೂಣಿಯಲ್ಲಿರಬೇಕು. ಬದ್ರಿಯಾ ಯೂಥ್ ಸೆಂಟರ್ ಸ್ಥಾಪನೆಯಾಗಿ 30 ವರ್ಷಗಳಾಗಿದೆ. ಇದರ ಮೂಲ ಉದ್ದೇಶ ಶೈಕ್ಷಣಿಕ, ಸಾಮಾಜಿಕ ಹಾಗೂ ಇನ್ನೂ ಹಲವು ಕಾರ್ಯಕ್ರಮಗಳ ಬಗ್ಗೆ ಸಮೂದಾಯದ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವುದಾಗಿದೆ .ಈ ಕಾರ್ಯದಲ್ಲಿ ಎಲ್ಲಾ ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು.ಹಸಿವು ಎಂದರೆ ಊಟ ಮಾಡದೇ ಇರುವುದಲ್ಲ, ಊಟ ಸಿಗದೇ ಇರುವುದು. ನಮ್ಮ ಉಪವಾಸ ಬಡವರ ಹಸಿವಿನ ಅಣಕವಾಗಬಾರದು ಎಂದು ಹೇಳಿದರು.
ಮಸೀದಿಯ ಖತಿಬರಾದ ಅಬ್ದುಲ್ ರಜಾಕ್ ಸಖಾಫಿ ದುವಾದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು,
ಕಾರ್ಯಕ್ರಮದಲ್ಲಿ ಬದ್ರಿಯಾ ಯೂತ್ ಸೆಂಟರ್‌ನ ಸಂಸ್ಥಾಪಕ ಅಧ್ಯಕ್ಷ ಪುರಸಭಾ ಸದಸ್ಯ ಯಾದ್ಗಾರ್ ಇಬ್ರಾಹಿಂ, ಬದ್ರಿಯಾ ಯೂತ್ ಸೆಂಟರ್ ಅಧ್ಯಕ ನೌಝಲ್, ಬದ್ರಿಯಾ ಯೂತ್ ಸೆಂಟರ್, ಗೌರವಾಧ್ಯಕ್ಷ ಕಶ್ವ ಸುಲೈಮಾನ್, ಶಾಫಿ, ಅಶ್ರಫ್, ಇಬ್ಬು, ಆಸಿಫ್, ರಾಫಿಲ್, ಸಿದ್ದಿಕ್, ಇರ್ಷಾದ್ ಮತ್ತು ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿಯ ಸದಸ್ಯರಾದ ಸೋಕತ್ ಆದಂ ಹಾಜಿ, ಸೌಕತ್ ಹಾಜಿ, ಇನ್ನಿತರರು ಉಪಸ್ಥಿತರಿದ್ದರು