Saturday, April 12, 2025
Homeವಿದೇಶಭೀಕರ ಕಾರು ಅಪಘಾತ- ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಸ್ಥಿತಿ ಗಂಭೀರ

ಭೀಕರ ಕಾರು ಅಪಘಾತ- ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಸ್ಥಿತಿ ಗಂಭೀರ

ಡೆಹ್ರಾಡೂನ್: ಟೀಂ ಇಂಡಿಯಾ (Team India) ಆಟಗಾರ ರಿಷಭ್ ಪಂತ್ (Rishabh Pant) ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು (Car Accident) ಪಂತ್ ಸ್ಥಿತಿ ಗಂಭೀರವಾಗಿದೆ.

ಉತ್ತರಾಖಂಡದಿಂದ (Uttarakhand) ದೆಹಲಿಗೆ ಹಿಂದಿರುಗುತ್ತಿದ್ದ ವೇಳೆ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ಲಾಸ್ಟಿಕ್ ಸರ್ಜರಿಯ (Plastic Surgery) ಅವಶ್ಯಕತೆ ಇರುವುದಾಗಿ ವರದಿಯಾಗಿದೆ.

 

ರಿಷಭ್ ಪಂತ್ ಅವರ ತಲೆ (ಹಣೆಯ ಭಾಗ), ಬೆನ್ನು, ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಸಕ್ಷಮ್ ಆಸ್ಪತ್ರೆಯ ಅಧ್ಯಕ್ಷ ಡಾ. ಸುಶೀಲ್ ನಗರ್ ತಿಳಿಸಿದ್ದಾರೆ

RELATED ARTICLES
- Advertisment -spot_img

Most Popular