ಕಳೆದ ಮೂರು ವರ್ಷಗಳಿಂದ ಸಕಲೇಶಪುರ ತಾಲ್ಲೂಕಿನ ಹೆಬ್ಬಸಾಲೆ ಗ್ರಾಮ ಪಂಚಾಯಿತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದಂತ ಪಿ.ಡಿ.ಓ ವತ್ಸಲಾ ಕುಮಾರಿ ರವರ ವರ್ಗಾವಣೆ ಬಹಳ ದುರದೃಷ್ಟಕರ.
ಕಳೆದ ಮೂರು ವರ್ಷಗಳಿಂದ ಹೆಬ್ಬಸಾಲೆ ಗ್ರಾಮ ಪಂಚಾಯ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರು ಬಂದಾಗಿನಿಂದ ನಿಯಮನುಸರವಾಗಿ ಗ್ರಾಮ ಪಂಚಯ್ತಿಯ ವ್ಯಪ್ತಿಯಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ನಡೆಸುತ್ತಾ ಬಂದಿರುತಾರೆ .ಹೆಬ್ಬಸಾಲೆ ಗ್ರಾಮ ಪಂಚಾಯತಿಯನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಾದರಿ ಗ್ರಾಮ ಪಂಚಾಯತಿಯಾಗಿ ಮಾಡಲು ಪಣ ತೊಟ್ಟಂತ ಅಧಿಕಾರಿ ವತ್ಸಲರವರು.
ಹಾಗೆಯೇ ಇಡೀ ಹೆಬ್ಬಸಾಲೆ ಗ್ರಾಮ ಪಂಚಾಯತಿಗೆ ಬರುವಂತಹ ಗ್ರಾಮಗಳನ್ನು ಶೌಚಾಲಯ ಮುಕ್ತ ಗ್ರಾಮವನ್ನಾಗಿ ಮಾಡಲು ತುಂಬಾ ಶ್ರಮ ಪಟ್ಟಂತಹ ಅಧಿಕಾರಿಗಳು ಕೂಡ ಹೌದು.ನಮ್ಮ ಗ್ರಾಮ ಪಂಚಾಯ್ತಿಯ ಯಾವುದೇ ಅನುದಾನವನ್ನು ವ್ಯರ್ಥ ಪೋಲು ಮಾಡದೇ ನಿಯಮನುಸರವಾಗಿ ಕ್ರಿಯಾ ಯೋಜನೆ ತಯಾರಿಸಿ ಗ್ರಾಮದ ಅಭಿವೃದ್ಧಿಯನ್ನು ಹಂತ ಹಂತವಾಗಿ ಮಾಡುತಾ ಬಂದಿರುತಾರೆ ಅದೇ ರೀತಿ ನಮ್ಮ ಗ್ರಾಮ ಪಂಚಾಯ್ತಿಯನ್ನು ಪೈಲೇಟ್ ಗ್ರಾಮ ಪಂಚಾಯ್ತಿಯನಾಗಿ ಆಯ್ಕೆ ಮಾಡಲಾಗಿರುತದೆ ಅದಕ್ಕೆ ಒಂದು ಉದಾ.. ಈ ವರ್ಷದ ದೂರ ದೃಷ್ಟಿ ಯೋಚನೆ ಗೆ ಹೆಬ್ಬಾಸಾಲೆ ಗ್ರಾಮ ಪಂಚಾಯ್ತಿಯನ್ನೇ ಆಯ್ಕೆ ಮಾಡಿ ಕೊಡಿರುತಾರೆ. ಇವರು ಯಾವುದೇ ಕೆಲಸಗಳನ್ನಾಗಲಿ ಕಾನೂನಿಗೆ ವಿರುದ್ದವಾಗಿ ಹಾಗೂ ಸರಕಾರದ ನಿಯಮವನ್ನು ಗಾಳಿಗೆ ತೂರಿ ಕೆಲಸ ಮಾಡಿದಂತ ಪುರಾವೆ ಇಲ್ಲ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕೆರೆ ಒತ್ತುವರಿಯನ್ನು ಸರ್ವೆ ಮಾಡಿಸಿ ಒತ್ತುವರಿ ಮಾಡಿದ್ದ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಲು ಮುಂದಾಗಿದ್ದರು.
ಹಾಗೂ ಕಳೆದ ವಾರ ಗಾಣದಹೊಳೆ ಸರ್ವೆ ನಂ.4 ರಲ್ಲಿ ಪ್ರಭಾವಿ ವ್ಯಕ್ತಿಯೊರ್ವರು ಒತ್ತುವರಿ ಮಾಡಿದ್ದಂತಹ ಪರಿಶಿಷ್ಟ ಜಾತಿಯ ಸ್ಮಶಾನವನ್ನು ಆಯಾ ಗ್ರಾಮದ ಸದ್ಯಸರ ಜೊತೆಗೂಡಿ ತೆರವು ಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಆದರೆ ಈ ಸ್ಮಶಾನ ಜಾಗವನ್ನು ತೆರವು ಗೊಳಿಸದಂತೆ ಕೆಲವು ರಾಜಕೀಯ ವ್ಯಕ್ತಿಗಳು ಧಮ್ಕಿ ಹಾಕಿದರು ಕೂಡ ಆ ಧಮ್ಕಿಗೆ ಹೆದರದೆ ನಾನು ಅಂದುಕೊಂಡಿರುವ ಕೆಲಸವನ್ನು ಮಾಡಿಯೇ ತೀರುತ್ತೇನೆ ಎನ್ನುವುದನ್ನು ತನ್ನ ಕಾರ್ಯವೈಖರಿಯ ಮೂಲಕ ಜನತೆಗೆ ಭರವಸೆಯನ್ನು ತಂದು ಕೊಟ್ಟಂತ ಪ್ರಾಮಾಣಿಕ ಅಧಿಕಾರಿ ಅಂದರೆ ತಪ್ಪಾಗಲಾರದು.ಹಾಗೆ ಅವರ ಕೆಲಸ ಕಾರ್ಯಗಳ ಬಗ್ಗೆ ಮೇಲಾಧಿಕಾರಿಗಳಿಂದ ಹಿಡಿದು ಹಲವಾರು ಜನ ಪ್ರತಿನಿಧಿಗಳು ಕೂಡ ಅವರ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಾರೆ ಹಾಗೂ ಪಿ.ಡಿ.ಓ ರವರಿಗೆ ಈಗಾಗಲೇ ಉತ್ತಮ ಕಾರ್ಯಗಳಿಗಾಗಿ ಪ್ರಶಸ್ತಿ ಸನ್ಮಾನಗಳು ಕೂಡ ದೊರಕಿದೆ..
ಗ್ರಾಮ ಪಂಚಾಯಿತಿಗಳಲ್ಲಿ ಎಷ್ಟು ಭ್ರಷ್ಟಾಚಾರ ನಡೆಯುತ್ತದೆ ಎಂಬುದು ಎಷ್ಟು ಸತ್ಯವೋ, ಪ್ರಾಮಾಣಿಕ ಅಧಿಕಾರಿಗಳಿಗೆ ನೆಲೆ ಇಲ್ಲವೆಂಬುದು ಕೂಡ ಅಷ್ಟೇ ಸತ್ಯ ಎನ್ನುವುದನ್ನು ವತ್ಸಲರವರ ವರ್ಗಾವಣೆ ಸಾಬೀತುಪಡಿಸಿದೆ.
ಇನ್ನೂ ಹಲವು ಕೆಲಸಗಳನ್ನು ಪೂರ್ಣಗೊಳಿಸಬೇಕಾಗುವ ಅಷ್ಟರಲ್ಲಿ ವರ್ಗಾವಣೆಗೊಂಡಿರುವ ವಿಚಾರ ಬಹಳ ಬೇಸರ ತರಿಸಿದೆ. ಈ ವರ್ಗಾವಣೆಯನ್ನು ಈ ಮೂಲಕ ನಾನು ಹೆಬ್ಬಸಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವತ್ಸಲರವರ ಮೇಲೆ ಭರವಸೆಯಿಟ್ಟಿದ್ದ ಜನತೆಯ ಪರವಾಗಿ ಖಂಡಿಸುತ್ತೇನೆ. ಆಗೇನಾದರೂ ವರ್ಗಾವಣೆ ಮಾಡಿದಲ್ಲಿ ಅಮೃತ ಗ್ರಾಮ ಯೋಜನೆ ಹಾಗೂ ಇನ್ನಿತರ ಯೋಜನೆಗೆ ಸಂಬಂಧಿಸಿದಂತ ಕೆಲಸಗಳು ನೆನೆಗುದ್ದಿಗೆ ಬಿದ್ದು ಗ್ರಾಮ ಪಂಚಾಯ್ತಿ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಆದ್ದರಿಂದ ಪ್ರಾಮಾಣಿಕ ಅಧಿಕಾರಿಗಳಿಗೆ ಅವರ ಆಶಯದಂತೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಮತ್ತು ಈ ನಿರ್ಧಾರವನ್ನು ಹಿಂಪಡೆದು ವತ್ಸಲರವರನ್ನು ಪುನಃ ಹೆಬ್ಬಸಾಲೆ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾಗಿ ನೇಮಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ…
ಧನ್ಯವಾದಗಳೊಂದಿಗೆ,
ಶಶಿಕುಮಾರ್-ಹೆನ್ನಲಿ
ಯುವಮುಖಂಡರು ಹಾಗೂ ಖಜಾಂಚಿಗಳು
ಭೀಮಾ ಕೋರೆಂಗಾವ್ ವಿಜಯೋತ್ಸವ ಸಮಿತಿ (ರಿ)-ಸಕಲೇಶಪುರ