ಸಕಲೇಶಪುರ : ಮರಳುಗಾರಿಕೆ, ಕಲ್ಲು ಗಣಿಗಾರಿಕೆ ಸೇರಿದಂತೆ ಯಾವುದೆ ಅಕ್ರಮದಲ್ಲಿ ಭಾಗಿಯಾಗದೆ ಕಳೆದ 15 ವರ್ಷಗಳಿಂದ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದೀನಿ ಎಂದು ಶಾಸಕ ಎಚ್ ಕೆ ಕುಮಾರಸ್ವಾಮಿ ಹೇಳಿದರು.
ತಾಲ್ಲೂಕಿನ ಕಬ್ಬಿನಗದ್ದೆ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯಡಿಯಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ 650 ಮೀಟರ್ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಈ ಭಾಗದ ಜನರ ಬಹಳ ವರ್ಷಗಳಿಂದ ರಸ್ತೆ ಬೇಡಿಕೆಯಾಗಿತ್ತು, ಸುಮಾರು 20 ಕೋಟಿ ರೂಪಾಯಿ ಎತ್ತಿನಹೊಳೆ ಅನುದಾನವನ್ನು ಬೆಳಗೋಡು ಹೋಬಳಿಗೆ ನೀಡಿದ್ದೇನೆ ಅದರಲ್ಲಿ 50 ಲಕ್ಷ ರೂ ಅನುದಾನವನ್ನು ಕಬ್ಬಿನಗದ್ದೆ ಗ್ರಾಮಕ್ಕೆ ಮೀಸಲಿಟ್ಟಿದ್ದೇನೆ ಎಂದರು. ಹಾಲೆಬೇಲೂರು ಕ್ರಾಸಿನಿಂದ ಬಾಳ್ಳುಪೇಟೆಯ ವರೆಗಿನ ಏಳು ಕಿಮಿ ರಸ್ತೆಯನ್ನು ಏಳು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ರಸ್ತೆ ಸೇರಿದಂತೆ ಮೂಲಭೂತ ಕಲ್ಪಿಸುವ ಸಂದರ್ಭದಲ್ಲಿ ಕುಗ್ರಾಮಗಳನ್ನು ಹುಡುಕಿ ಅನುದಾನ ನೀಡಿದ್ದೇನೆ ಎಂದರು, ತಾಲ್ಲೂಕಿನ ಸುಮಾರು 46 ಗ್ರಾಮಗಳಿಗೆ ಎತ್ತಿನಹೊಳೆ ಅನುದಾನದಿಂದ ರಸ್ತೆ ಕಾಮಗಾರಿ ಕೈಗೊಂಡಿದ್ದೇವೆ. ಸ್ವತಂತ್ರ ಬಂದು ಎಪ್ಪತ್ತು ವರ್ಷಗಳಾದರು ರಸ್ತೆಯನ್ನು ಕಾಣದ ಗ್ರಾಮಗಳಿದ್ದವು, ಅಂತಹ ಗ್ರಾಮದಲ್ಲಿ ಇಂದು ರೈತರು ಜನಸಾಮಾನ್ಯರು ನೆಮ್ಮದಿಯಾಗಿ ತಿರುಗಾಡುವಂತಾಗಿದೆ ಎಂದರು. ಹದಿನೈದು ವರ್ಷದ ನನ್ನ ಶಾಸಕ ಅವಧಿಯಲ್ಲಿ ಒಂಬತ್ತು ವರ್ಷ ಬಿಜೆಪಿ, ಐದು ವರ್ಷ ಕಾಂಗ್ರೆಸ್ ಅಡಳಿತ ನಡೆಸಿದೆ ನಮ್ಮ ಪಕ್ಷ ಕೇವಲ ಒಂದು ವರ್ಷ ಅಡಳಿತ ನಡೆಸಿದರು ಸಹ ಸಾಕಷ್ಟು ಅನುದಾನವನ್ನು ನನ್ನ ಕ್ಷೇತ್ರಕ್ಕೆ ತಂದಿದ್ದೇನೆ ಎಂದರು.
ಈ ಸಂದ‘ರ್ದಲ್ಲಿ ಮಳಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್, ಮುಖಂಡರುಗಳಾದ ನಾಗರಾಜ್, ಕುಮಾರ್, ಆನಂತರಾಮ್, ಗ್ರಾ.ಪಂ ಸದಸ್ಯರುಗಳಾದ ಯೋಗೇಶ್, ರವಿ,ಷಣ್ಮುಖ,ಮದನ್, ಮಹಾದೇವಮ್ಮ, ಪಿಡಿಓ ರಂಗಸ್ವಾಮಿ ಮತ್ತು ವಿಶ್ವೇಶ್ವರಯ್ಯ ಜಲ ನಿಗಮದ ಇಕ್ಬಾಲ್ ಅಹಮದ್ ಇನ್ನಿತರರು ಇದ್ದರು