ಹಾಸನ: ಇಂದಿಗೂ ದೇಶದಲ್ಲಿ ನಿತ್ಯ ಮಹಿಳೆಯರು,ಮಕ್ಕಳು ಹಾಗೂ ದಲಿತರ ಮೇಲೆ ದೌರ್ಜನ್ಯ ಗಳು , ಶೋಷಣೆ,ದಬ್ಬಾಳಿಕೆ ನಡೆಯುತ್ತಿರುವುದು ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ ಇದಕ್ಕೆ ಸುಧಾರಣೆ ಹಾಗೂ ಬದಲಾವಣೆ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಶಾಸಕ ಹೆಚ್.ಕೆ.ಕುಮಾರಸ್ವಾಮಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಸಮಾಜಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದ
ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್
ಅಂಬೇಡ್ಕರ್ ರವರ ಪ್ರತಿಮೆಗೆ ಪುಶ್ಪಾರ್ಚನೆ ನೆರವೇರಿಸಿ 66ನೇ ಪರಿನಿರ್ವಾಣ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಶೋಷಿತರು
ಏ.14. ಹಾಗೂ ಡಿ.6 ಸ್ಮರಣಿಯvದಿನವಾಗಿದೆ.ಆದರೆ ಇಂದು
ದೇಶದಲ್ಲಿ ಅವರ ಪ್ರತಿಪಾದಿಸಿದ ತತ್ವ ಸಿದ್ದಾಂತಕ್ಕೆ ವಿರೋಧವಾಗಿ ಘಟನೆಗಳು ನಡೆಯುತ್ತಿರುವುದು
ಬಾಬಾಸಾಹೇಬರಿಗೆ ಮಾಡಿದ ಅವಮಾನವಾಗಿದೆ.
ಸಂವಿಧಾನದ ಆಶಯಗಳಿಗೆ ಅಣಕ ಮಾಡುವ ಘಟನೆಗಳು
ನಡೆಯುತ್ತಿದೆ ದೌರ್ಜನ್ಯ ದಬ್ಬಾಳಿಕೆ ಇನ್ನು ಜೀವಂತವಾಗಿದ್ದು ದೇಶದ ಸಂವಿಧಾನದಡಿ ಕಾನೂನನ್ನು ಜಾರಿಗೆ ತಂದರು ಸುಧಾರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಕ್ಕನ್ನು ಪಡೆಯಲು ಡಾ.ಅಂಬೇಡ್ಕರ್ ಅವರು ಹೋರಾಟದ
ಮಾರ್ಗ ಹಿಡಿದರು ಇಂದೂ ಸಹbಯಾವುದೇ ಒಂದು ಹಕ್ಕನ್ನು ಪಡೆಯಲು ಹೋರಾಟದಿಂದvಮಾತ್ರ ಸಾಧ್ಯವಾಯಿತು, ಶೋಷಿತ ಕಾರ್ಮಿಕರ, ಮಹಿಳೆಯರ
ಪರವಾಗಿ ಧ್ವನಿ ಎತ್ತಿ ಹೋರಾಟ ಮಾಡಿದ್ದರಿಂದ ಇಂದಿಗೂ ಅವರಿಗೆ ಸಮಾಜದಲ್ಲಿ ಮನ್ನಣೆ ದೊರೆತಿದೆ ಕನಿಷ್ಠ ಅವರ ಆಶಯಕ್ಕೆ ಅನುಗುಣವಾಗಿ ಹೋಗೋಣ ಅವರ
ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವುದು ಪ್ರಸ್ತುತ ಸಮಾಜಕ್ಕೆ ಹೆಚ್ಚು ಅಗತ್ಯವಾಗಿದೆ ಎಂದರು.
ಗದ್ಗದಿತರಾಗಿ ಕಣ್ಣೀರಿಟ್ಟ ಕುಮಾರಸ್ವಾಮಿ
ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ ಪ್ರಸ್ತುತಸಮಾಜದಲ್ಲಿ ದಲಿತರ ಮೇಲಿನ ದೌರ್ಜನ್ಯ ದಬ್ಬಾಳಿಕೆಯನ್ನುನೆನೆದು ಶಾಸಕ ಎಚ್ ಕೆ ಕುಮಾರಸ್ವಾಮಿ ಅವರು ಗದ್ಗದಿತರಾಗಿ ಮಾತನಾಡಿದರು.ಇಂದಿಗೂ ಸಮಾಜದಲ್ಲಿ ಶೋಷಣೆ ಮುಂದುವರೆದಿದ್ದು ಹೋರಾಟ ಮೂಲಕವೇ ಹಕ್ಕನ್ನುಪಡೆಯಬೇಕಾಗಿರುವುದುಸದ್ಯದ ಪರಿಸ್ಥಿತಿಯಾಗಿದೆಎಂದು ವಿಷಾಧಿಸಿದರು.