Friday, November 22, 2024
Homeಸುದ್ದಿಗಳುಸಕಲೇಶಪುರಮೂಲಭೂತ ಸೌಕರ್ಯ ಕಲ್ಪಿಸಲು ಅರಣ್ಯ ಇಲಾಖೆ ಅಡಚಣೆ; ಶಾಸಕ ಎಚ್ ಕೆ ಕುಮಾರಸ್ವಾಮಿ

ಮೂಲಭೂತ ಸೌಕರ್ಯ ಕಲ್ಪಿಸಲು ಅರಣ್ಯ ಇಲಾಖೆ ಅಡಚಣೆ; ಶಾಸಕ ಎಚ್ ಕೆ ಕುಮಾರಸ್ವಾಮಿ

  • ಸಕಲೇಶಪುರ : ಅರಣ್ಯ ಇಲಾಖೆಯು ವಿನಾಕಾರಣ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಡಚಣೆ ಉಂಟು ಮಾಡುತ್ತಿರುವುದು ಕೂಡಲೆ ನಿಲ್ಲಿಸಬೇಕು ಎಂದು ಶಾಸಕ ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನೆಲಗಳ್ಳಿ ಕಾಲೋನಿ ರಸ್ತೆಯನ್ನು ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಈ ಭಾಗದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜನರೇ ಹೆಚ್ಚಾಗಿ ವಾಸ ಮಾಡುತ್ತಿದ್ದು ಅಗತ್ಯವಾಗಿ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ನಿರ್ಮಾಣಕ್ಕೆ ಎಚ್‌ಅರ್‌ಪಿ ಅನುದಾದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಈ ಭಾಗವನ್ನು ಸೆಕ್ಷನ್ 4 ರಡಿಯಲ್ಲಿ ಬರುವುದರಿಂದ ಯಾವುದೇ ಕಾರಣಕ್ಕೂ ಕಾಂಕ್ರೀಟ್ ರಸ್ತೆಯನ್ನು ಕಾಮಗಾರಿಯನ್ನು ಮಾಡ ಕೂಡದು ಎಂದು ಕಾಮಗಾರಿಗೆ ಅಡಚಣೆ ಮಾಡುತ್ತಿದ್ದಾರೆ ಎಂದರು. ನಾಲ್ಕಾರು ತಲೆಮಾರುಗಳಿಂದದ ಜನಗಳು ಈ ಜಾಗದಲ್ಲಿ ಜೀವನ ನಡೆಸುತ್ತಿದ್ದು ಅರಣ್ಯ ಇಲಾಖೆ ಮದ್ಯ ಪ್ರವೇಶ ಮಾಡಿ ಅಭಿವೃದ್ದಿ ಪಡಿಸುತ್ತಿರುವ ರಸ್ತೆ ಅರಣ್ಯ ಇಲಾಖೆಗೆ ಸೇರಿದೆ ಎಂದು ಹೇಳಿ ಈ ಭಾಗದ ಜನರ ಮೂಲಭೂತ ಸೌಕರ್ಯಕ್ಕೆ ಅಡಚಣೆ ಮಾಡುತ್ತಿದೆ. ಈ ಬಗ್ಗೆ ಅರಣ್ಯ ಖಾತೆ ಹೊಂದಿರುವ ಮುಖ್ಯಮಂತ್ರಿ ಬೊಮ್ಮಯಿಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ, ದಿಶಾ ಮೀಟಿಂಗಿನಲ್ಲಿ ಸಂಸದರ ಜೊತೆ ಚರ್ಚಿಸಲಾಗಿದ್ದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಈ ಸಮಸ್ಯೆಯನ್ನು ಬಗೆಹರಿಸಿ ಕೊಡುವಂತೆ ಹೇಳಿದ್ದೇನೆ ಎಂದು ಹೇಳಿದರು.
ಈ ಸಮಸ್ಯೆ ಕೇವಲ ನೆಲಗಳ್ಳಿ ಮಾತ್ರವಲ್ಲದೆ ಹಾನುಬಾಳುವಿನ ಸುತ್ತಮುತ್ತಲಿನ ಗ್ರಾಮದಲ್ಲೂ ಈ ಸಮಸ್ಯೆ ಇದೆ. ಹೊಡಚಹಳ್ಳಿಯಿಂದ ದೇವಲಾದಕೆರೆ ಒಂದುವರೆ ಕಿಮಿ ರಸ್ತೆಯನ್ನು ಒಂದುವರೆ ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿದ್ದೇವೆ ಎಂದು ಹೇಳಿದರು

RELATED ARTICLES
- Advertisment -spot_img

Most Popular