ಸಕಲೇಶಪುರ : ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಾಲೆಯ ಅಡಳಿತ ವರ್ಗ, ಶಿಕ್ಷಕ ವೃಂದ, ಪೋಷಕರ ಮೇಲಿದೆ ಎಂದು ಶಾಸಕ ಎಚ್ ಕೆ ಕುಮಾರಸ್ವಾಮಿ ಹೇಳಿದರು.ಪಟ್ಟಣ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಒಲಂಪಸ್ ಶಾಲೆಯ ಪ್ರಥಮ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಕ್ಕಳು ದೇಶದ ಆಸ್ತಿ. ಅವರನ್ನು ಪ್ರೀತಿಯಿಂದ ನೋಡಿಕೊಂಡು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆ ಸಮಾಜದ ಎಲ್ಲರದ್ದು. ಶಿಕ್ಷೆ ರಹಿತ ಸಂತಸದಾಯಕ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಶಾಲೆಗಳು ಮತ್ತು ಕುಟುಂಬಗಳು ಕಾರ್ಯ ನಿರ್ವಹಿಸಬೇಕು ಎಂದರು.ಮಕ್ಕಳಿಗೆ ಸಮಯ ನೀಡಿ, ಅವರನ್ನು ಸರಿದಾರಿಯಲ್ಲಿ ಬೆಳೆಸಲು ತರಬೇತಿ ಹೊಂದಿದ ಶಿಕ್ಷಕರಿಂದ ಮಾತ್ರ ಸಾದ್ಯ, ಶಾಲೆಯಲ್ಲಿ ಮಕ್ಕಳಿಗೆ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರಗಳನ್ನು ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ನಾವು ಕಲಿಸುವ ಎಲ್ಲವನ್ನೂ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕಲಿತುಕೊಳ್ಳುತ್ತಾರೆ ಆ ಕಾರಣದಿಂದ ಮಕ್ಕಳ ಪ್ರತಿಭೆಗಳನ್ನು ಗುರುತಿಸುವ ಜೊತೆಗೆ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳ ಬೇಕು ಎಂದರು. ಈ ನಿಟ್ಟಿನಲ್ಲಿ ಒಲಂಪಸ್ ಶಾಲೆಯಲ್ಲಿ ಪ್ರಾಥಮಿಕ ಶಾಲೆಗೆ ಚಾಲನೆ ನೀಡಿದರು ಇಲ್ಲಿ ನುರಿತ ಶಿಕ್ಷಕರು, ಉತ್ತಮ ಶಾಲಾ ಕಟ್ಟಡ, ಉತ್ತಮ ವಾತವರಣದಲ್ಲಿ ಇರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾದನೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಒಲಂಪಸ್ ಶಾಲೆಯ ಕೀರ್ತಿ ಇನ್ನಷ್ಟು ಎತ್ತರಕ್ಕೆ ಬೆಳೆದು ಶಿಕ್ಷಣದಲ್ಲಿ ರಾಜ್ಯಕ್ಕೆ ಮಾದರಿ ಶಾಲೆಯಾಗಲಿ ಎಂದು ಹೇಳಿದರು.ಪುಟಾಣಿ ಮಕ್ಕಳು ಆನೆ ಮತ್ತು ಮಾನವ ಸಂಘರ್ಷದ ಕುರಿತು ಮಾಡಿದ ಕಿರು ನಾಟಕ ಮೆಚ್ಚುಗೆಗೆ ಪಾತ್ರವಾಯಿತು, ಖ್ಯಾತ ಮಾತನಾಡುವ ಗೊಂಬೆ ಕಲಾವಿದೆ ಇಂದೂಶ್ರೀ ರವೀಂದ್ರರವರಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಆರ್‌ಜೆ ಅರ್ಪಿತ್ ನಿರೂಪಣೆ ಮಾಡಿದರು
ಈ ವೇಳೆ ಮಾಜಿ ಶಾಸಕ ಎಚ್ ಎಂ ವಿಶ್ವನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ನಿರ್ಗಮಿತ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ್, ಖ್ಯಾತ ವೈದ್ಯ ಸುಧಾಕರ್, ಡಾ ಲೀಲಾವತಿ, ಚನ್ನವೇಣಿ ಶೆಟ್ಟಿ, ಇನ್ನಿತರರು ಇದ್ದರು