ಸಕಲೇಶಪುರ : ಕೌಶಲ್ಯ ಹಾಗೂ ಕ್ರೀಡೆ ಯಶಸ್ವಿ ಜೀವನಕ್ಕೆ ಬದ್ರ ಬುನಾದಿ ಎಂದು ಶಾಸಕ ಎಚ್. ಕೆ ಕುಮಾರಸ್ವಾಮಿ ಹೇಳಿದರು.
.ತಾಲೂಕಿನ ವಣಗೂರು ಗ್ರಾಮದ ಶ್ರೀಕುಮಾರ್ ಲಿಂಗೇಶ್ವರ ಕ್ರೀಡಾ ಮತ್ತು ಸಾಂಸ್ಕೃತಿ ಸಮಿತಿ ಗ್ರಾಮದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಕಬ್ಬಡಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಕೌಶಲ್ಯ ನಮ್ಮನ್ನು ಸದೃಢ ಗೊಳಿಸಿದರೆ ಕೌಶಲ್ಯವು ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದರು.
ಕೇಂದ್ರ ಸರಕಾರ ನಿರುದ್ಯೋಗಿ ಯುವಕರಿಗಾಗಿ ಕೌಶಲ್ಯ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಿದೆ ಇದರ ಉದ್ದೇಶ
ಯುವಕರು ಊರಿನಿಂದ ವಲಸೆ ಹೋಗದೆ ಊರಿನಲ್ಲಿದ್ದುಕೊಂಡು ಏನಾದರು ಒಂದು ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಉದ್ದೇಶವೆಂದರು. ವಣಗೂರು ಗ್ರಾಮಕ್ಕೆ ಈ ಹಿಂದೆ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಿಸಿಕೊಟ್ಟಿದ್ದರು ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚಿಹೋಗಿದೆ ಪೋಷಕರು ಮಕ್ಕಳನ್ನು ತಮ್ಮ ಊರಿನಲ್ಲಿ ಇರುವಂತಹ ಸರಕಾರಿ ಶಾಲೆಗಳಿಗೆ ಕಲಿಸುವಂತಹ ಪರಿಪಾಠವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು
ವಾರ್ತಾ ಇಲಾಖೆ ಅಧಿಕಾರಿ ವಿನೋದ್ ಚಂದ್ರ ಮಾತನಾಡಿ ಯುವಕರು ಸ್ಥಳೀಯವಾಗಿ ದೊರಕುವ ಕಾಡು ಉತ್ಪನ್ನಗಳಿಗೆ ಇಂದು ಜಾಗತಿಕ ಮಟ್ಟದಲ್ಲಿ ಹೇರಳವಾದ ಬೇಡಿಕೆ ಇದೆ ಎಂದರು.
ಮಲೆನಾಡು ಭಾಗದ ಕಾಡಂಚಿನ ಪ್ರದೇಶದಲ್ಲಿ ದೊರೆಯುವ ಕಾಡುತ್ಪತ್ತಿಗೆ ಇರುವ ಬೇಡಿಕೆಯನ್ನು ಸದ್ಬಳಕೆಯನ್ನು ಮಾಡಿಕೊಂಡು ಸ್ಥಳೀಯವಾಗಿ ತಮ್ಮ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಂಡು ಉದ್ಯಮದಲ್ಲಿ ತೊಡಗಿಕೊಂಡರೆ ಯಶಸ್ವಿಯಾಗುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ ಎಂದು ಹೇಳಿದರು
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಸತೀಶ್ ಬೆಳ್ಳಿ,
ಕಮಲಮ್ಮ, ಚಂದ್ರೇಗೌಡ, ಶಿವಕುಮಾರ್, ತಮ್ಮಣ್ಣಿಗೌಡ, ವೆಂಕಟೇಶ್ ಮಾಸ್ಟರ್, ರಾಮಚಂದ್ರ ರಾವ್, ಗ್ರಾಪಂ ಮಾಜಿ ಅಧ್ಯಕ್ಷ ಅನಂದ್ ಇದ್ದರು