ಹೆತ್ತೂರು ಬೆಳೆಗಾರರ ಸಂಘಕ್ಕೆ ಸಮಾಜ ಸೇವಕ ಬಾಚಿಹಳ್ಳಿ ಪ್ರತಾಪ್ ಗೌಡ ನಿರ್ಮಿಸಿ ಕೊಟ್ಟಿರುವ ಕಟ್ಟಡ ಡಿ.15 ಕ್ಕೆ ಉದ್ಘಾಟನೆ
ಸಕಲೇಶಪುರ :
ಮುಂದಿನ ತಿಂಗಳು ಹೆತ್ತೂರು ಬೆಳೆಗಾರರ ಸಂಘದ ವತಿಯಿಂದ ನಡೆಯಲಿರುವ ಬೆಳೆಗಾರರ ಬೃಹತ್ ಸಮಾವೇಶ ಹಾಗೂ ಶ್ರೀ ಪ್ರತಾಪ್ ಗೌಡ ಬಾಚಿಹಳ್ಳಿರವರು ಸಂಘಕ್ಕೆ ನಿರ್ಮಿಸಿ ಕೊಟ್ಟಿರುವ ನೂತನ ಕಟ್ಟಡ ಉಧ್ಘಾಟನೆ ಡಿಸೇಂಬರ್ 15 ರಂದು ಜರುಗಲಿದೆ.
ಕಟ್ಟಡದ ಲೋಕಾರ್ಪಣೆಗೊಳಿಸಲು ಶ್ರೀ ಶ್ರೀ ಶ್ರೀ ಡಾ॥ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಸೋಮವಾರ ಬೆಳೆಗಾರರು ಹಾಗೂ ಗ್ರಾಮಸ್ಥರು ಮಠಕ್ಕೆ ತೆರಳಿ ಭಕ್ತಿ ಪೂರ್ವಕವಾಗಿ ಆಹ್ವಾನಿಸಿದರು.ಅಹ್ವಾನ ಸ್ವೀಕರಿಸಿ ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.