ಸಕಲೇಶಪುರ : ಜಿಲ್ಲಾ ಪಂಚಾಯತ್ ಹಾಸನ. ಶಿಕ್ಷಣ ಇಲಾಖೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಚನ್ನರಾಯಪಟ್ಟಣ ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತಾಲ್ಲೂಕಿನ ಹೆತ್ತೂರಿನ ಶಾನ್ವಿ ಹಿರಿಯ ಪ್ರಾಥಮಿಕ ಪಾಠಶಾಲೆಯ ದುರ್ಗೇಶ್ ಮೌರ್ಯ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಯು ಈ ತಿಂಗಳ ಹತ್ತನೇ ತಾರೀಖಿನಿಂದ ಹದಿಮೂರರ ವರೆಗೆ ದ ಕ ಜಿಲ್ಲೆಯ ಕಟೀಲಿನಲ್ಲಿ ನಡೆಯಲಿದೆ. ವಿದ್ಯಾರ್ಥಿಯ ಸಾಧನೆಗೆ ಶಾನ್ವಿ ಶಾಲೆಯ ಪ್ರಿನ್ಸಿಪಾಲರಾದ ಬಾಲಸುಬ್ರಹ್ಮಣ್ಯ ಹಾಗೂ ಕರಾಟೆ ತರಬೇತುದಾರ ಕಲಂದರ್ ಬಾಬಾ ಅಭಿನಂದನೆ ಸಲ್ಲಿಸಿದ್ದಾರೆ.