ಸಕಲೇಶಪುರ ನ.26 ರಂದು ಸೀಳು ತುಟಿ ಮತ್ತು ಸೀಳು ಅಂಗಳ ಪೀಡಿತರನ್ನು ಗುರುತಿಸುವಿಕೆ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ.
ಸಾರ್ವಜನಿಕ ಆಸ್ಪತ್ರೆ ಮತ್ತು ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ಲಯನ್ಸ್ ಕ್ಲಬ್, ಸಕಲೇಶಪುರ,ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ
ಇವರ ಸಂಯುಕ್ತಾಶ್ರಯದಲ್ಲಿ ಸೀಳು ತುಟಿ ಮತ್ತು ಸೀಳು ಅಂಗಳ ಪೀಡಿತರನ್ನು ಗುರುತಿಸುವಿಕೆ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಜರುಗಲಿದೆ.
ಪಟ್ಟಣದ ಕಾಫರ್ಡ್ ಸಾರ್ವಜನಿಕ ಆಸ್ಪತ್ರೆ ಸಕಲೇಶಪುರ ಇಲ್ಲಿ ನವಂಬರ್ 26ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಶಿಬಿರ ನೆಡೆಯಲಿದೆ.
ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ ಸೈಲ್ ಟ್ರೈನ್ ವಿಭಾಗ, 6 ನೇ ಮಹಡಿ ಹೊಸ ಕಟ್ಟಡ ಮಿಲ್ಲರ್ ರಸ್ತೆ, ವಸಂತನಗರ, Borded-560 052
ಚಿರಂತನ ಟ್ರಸ್ಟ್ ನಂ. – 2994 ಪ್ರೇಮಚಂದ್ರ, 17 ನೇ ಕ್ರಾಸ್, 2ನೇ ಮುಖ್ಯ ರಸ್ತೆ, ಕೆ. ಆರ್. ರೋಡ್, ಬನಶಂಕರಿ 2 ನೇ ಹಂತ, ಬೆಂಗಳೂರು – 70
ಇವರ ಸಹಭಾಗಿತ್ವದಲ್ಲಿ ಶಿಬಿರ ನಡೆಯಲಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಿಳಿಯಬಹುದಾಗಿದೆ.
* 9743879434
* 9964134057