Sunday, November 24, 2024
Homeಸುದ್ದಿಗಳುಹಾಸನ ಜಿಲ್ಲೆಯಲ್ಲಿ ‌ ಕಾಡಾನೆ ಹಾವಳಿ ತಡೆಗೆ ಕ್ರಮ:ಸಚಿವ ಕೆ.ಗೋಪಾಲಯ್ಯ

ಹಾಸನ ಜಿಲ್ಲೆಯಲ್ಲಿ ‌ ಕಾಡಾನೆ ಹಾವಳಿ ತಡೆಗೆ ಕ್ರಮ:ಸಚಿವ ಕೆ.ಗೋಪಾಲಯ್ಯ

ಹಾಸನ ಜಿಲ್ಲೆಯಲ್ಲಿ ‌ ಕಾಡಾನೆ ಹಾವಳಿ
ತಡೆಗೆ ಕ್ರಮ:ಸಚಿವ ಕೆ.ಗೋಪಾಲಯ್ಯ

ಹಾಸನ,ನ.23: ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಾನೆ ಹಾವಳಿ ತಡೆ ಸಂಬಂಧ ವಿಶೇಷ ತಂಡ ಬಂದು ಈಗಾಗಲೇ ಅಧ್ಯಯನ ಕೂಡ ನಡೆಸಿದೆ. ಈ ವಿಚಾರವನ್ನು ಸಿಎಂ ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ತಜ್ಞರ ತಂಡ ವರದಿ ಕೊಟ್ಟ ಬಳಿಕ ಸಿಎಂ ಜೊತೆ ಮತ್ತೆ ಮಾತನಾಡುವುದಾಗಿ ತಿಳಿಸಿದರು.

ಆನೆ ಹಾವಳಿ ತಡೆಗೆ ಏನೆಲ್ಲಾ ಮಾಡಬಹುದು ಎಂದು ಚರ್ಚೆ ಮಾಡಲಾಗುತ್ತೆ. ಒಂದೇ ದಿನಕ್ಕೆ ಎಲ್ಲವನ್ನೂ ಮಾಡಲು ಆಗುವುದಿಲ್ಲ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಆನೆಗಳ ಸ್ಥಳಾಂತರದ ಕೆಲಸ ಹಂತ ಹಂತವಾಗಿ ಆಗುತ್ತದೆ ಎಂದರು.

ಆನೆ ಹಾವಳಿ ತಡೆಗೆ ರಾಜ್ಯದಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ. ಕೇಂದ್ರದಿಂದ ಹೆಚ್ಚಿನ ಅನುದಾನ ಹಾಗೂ ಕಡಿಮೆ ಹಣದಲ್ಲಿ ರೈಲ್ವೆ ಹಳಿಗಳನ್ನು ನೀಡುವಂತೆ ಮನವಿ ಮಾಡಲಾಗುವುದು. ಗಣಿಗಾರಿಕೆ ಸೇರಿದಂತೆ ಹಲವು ಯೋಜನೆಗಳ ಅನುಷ್ಟಾನ ದಿಂದ ಆನೆ ಸೇರಿದಂತೆ ಹಲವು ಕಾಡು ಪ್ರಾಣಿಗಳು ತಮ್ಮ ಆವಾಸ ಸ್ಥಾನ ಬದಲಿಸುತ್ತಿವೆ. ವನ್ಯ ಜೀವಿಗಳು ಹಾಗೂ ಮಾನವ ಸಂಘರ್ಷ ತಡೆಗೆ ಇಲಾಖೆ ವತಿಯಿಂದ ಗಂಭೀರ ಪ್ರಯತ್ನವನ್ನು ವೈಜ್ಞಾನಿಕವಾಗಿ ಮಾಡಲಾಗುವುದು ಎಂದರು.

ಈ ಭಾಗದಲ್ಲಿ ನೂರಕ್ಕೂ ಅಧಿಕ‌ ಆನೆಗಳು ಎರಡು ,ಮೂರು ಗುಂಪುಗಳಾಗಿ ವಾಸ ಮಾಡುತ್ತಿವೆ.‌ಇದೀಗ ನನಗೆ ಇರುವ ಮಾಹಿತಿ ಪ್ರಕಾರ ಆನೆಗಳನ್ನು ಬೇರೆಕಡೆಗೆ ಸ್ಥಳಾಂತರ ಮಾಡಾಗುತ್ತಿದೆ.‌ಇದಕ್ಕಾಗಿ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ ಎಂದರು.

ಕಳೆದ ಏಳೆಂಟು ವರ್ಷದಿಂದ ಆನೆಗಳ ಸಂತಾನಾಭಿವೃದ್ಧಿ ಅಧಿಕವಾಗಿದೆ. ಇವುಗಳಿಗೆ ಅರಣ್ಯದಲ್ಲಿಯೇ ನೀರು ಮತ್ತು ಆಹಾರ ಸಿಗುವಂತೆ ನೋಡಿಕೊಳ್ಳವುದು ಅಗತ್ಯವಾಗಿದೆ ಎಂದರು.

RELATED ARTICLES
- Advertisment -spot_img

Most Popular