Saturday, April 12, 2025
Homeಸುದ್ದಿಗಳುಆಣೆ ಪ್ರಮಾಣ ಮಾಡಲು ಹೋಗಿ ಕೆರೆಗೆ ಬಿದ್ದು ಇಬ್ಬರ ಸಾವು...!

ಆಣೆ ಪ್ರಮಾಣ ಮಾಡಲು ಹೋಗಿ ಕೆರೆಗೆ ಬಿದ್ದು ಇಬ್ಬರ ಸಾವು…!

ಹಾಸನ: ತಾಲೂಕಿನ ತೇಜೂರು ಗ್ರಾಮದ ಇಬ್ಬರು ವ್ಯಕ್ತಿಗಳಿಗೆ ವ್ಯವಹಾರದ ವಿಷಯದಲ್ಲಿ ತಗಾದೆಯಾಗಿ ಗಂಗೆ ಆಣಿ ಮಾಡಲು ಹೋಗಿದ್ದು, ಇಬ್ಬರೂ ಕಾಲು ಜಾರಿ ನೀರಿಗೆ (Drowned) ಬಿದ್ದು ಮೃತಪಟ್ಟಿದ್ದಾರೆ.

ಚಂದ್ರು (35), ಆನಂದ್ (30) ಮೃತ ವ್ಯಕ್ತಿಗಳು. ತೇಜೂರು ಕೆರೆಯ ಬಳಿ ಅವಘಡ ಸಂಭವಿಸಿದೆ. ಇವರಿಬ್ಬರ ನಡುವೆ ವ್ಯವಹಾರದ ವಿಚಾರವಾಗಿ ಜಗಳ ನಡೆದಿದೆ. ಎಷ್ಟೇ ಮಾತನಾಡಿದರೂ ಬಗೆಹರಿದಿಲ್ಲ. ಪರಸ್ಪರ ಅಪನಂಬಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಇಬ್ಬರೂ ದೇವರ ಮೊರೆ ಹೋಗಲು ನಿರ್ಧರಿಸಿದ್ದಾರೆ. ಆಣಿ ಮಾಡಲು ಮುಂದಾಗಿದ್ದಾರೆ. ಆಣಿ ಮಾಡುವುದಾದರೆ ಎಲ್ಲಿ ಮಾಡುವುದು? ಯಾವ ರೀತಿಯ ಆಣಿ ಮಾಡುವುದು ಎಂಬ ಪ್ರಶ್ನೆ ಬಂದ ಹಿನ್ನೆಲೆಯಲ್ಲಿ ಗಂಗೆ ಆಣಿ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಗುರುವಾರ ರಾತ್ರಿ ಇಬ್ಬರೂ ಆಣಿ ಮಾಡಲು ತೇಜೂರು ಕೆರೆ ಬಳಿಗೆ ಹೋಗಿದ್ದಾರೆನ್ನಲಾಗಿದೆ. ಆಗ ಕಾಲು ಜಾರಿ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಬೆಳಗ್ಗೆಯಾದರೂ ಇವರು ಪತ್ತೆ ಇಲ್ಲದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಕೆರೆಯಲ್ಲಿ ಬಿದ್ದು ಮೃತಪಟ್ಟಿರುವುದು ಗೊತ್ತಾಗಿದೆ.

RELATED ARTICLES
- Advertisment -spot_img

Most Popular