ಆಲೂರು : ಹಾಸನದ ಅಧಿದೇವತೆ ಹಾಸನಾಂಬೆಯ ಸಹೋದರಿ ಎಂದು ಹೇಳುವ ಸಪ್ತ ಮಾತ್ರೆಯಲ್ಲಿ ಒಬ್ಬರಾದ ಆಲೂರು ತಾಲ್ಲೂಕಿ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಕೆಂಚಾಂಬಿಕೆ ದೇವಿಯರ ಚಿಕ್ಕ ಜಾತ್ರಾ ಮಹೋತ್ಸವ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ನೆರವೇರಿತು.
ಇಂದು ಬೆಳಗ್ಗೆ ಶ್ರೀ ಕೆಂಚಾಂಬ ದೇವಿ ಅವರ ವಿಗ್ರಹ ಹಾಗೂ ಒಡವೆಗಳನ್ನು ಮೂಲ ಸ್ಥಾನದಿಂದ ಜನಪದ ಕಲಾ ತಂಡಗಳೊಂದಿಗೆ ನೂರಾರು ಭಕ್ತರ ಸಮೂಹದಲ್ಲಿ ಮೆರವಣಿಗೆ ಮೂಲಕ ಹರಿಹಳ್ಳಿ ಗ್ರಾಮದಲ್ಲಿರುವ ಮೂಲ ದೇವಾಲಯಕ್ಕೆ ಕರತರಲಾಯಿತು ಶನಿವಾರ ಸಂಜೆ ಮೂಲ ದೇವಸ್ಥಾನದಲ್ಲಿ ಸಪ್ತಮಾತೃಕಾ ಅಲಂಕಾರ, ಉದ್ವಾರ್ಚನೆ ಸುಗ್ಗಿ ಕಾರ್ಯಕ್ರಮ ನಡೆಯಿತು.
ಭಾನುವಾರ ಬೆಳಗ್ಗೆ ದೇವಸ್ಥಾನದ ಬಳಿ ಜಾತ್ರೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಪ್ರಾರಂಭವಾದವು. ಮಧ್ಯಾಹ್ನ ೨.೩೦ ಕ್ಕೆ ಸರಿಯಾಗಿ ಕೆಂಡೋತ್ಸವ ನೆರವೇರಿತು. ದೇವಸ್ಥಾನದ ಸುತ್ತ ಬಲಿಅನ್ನ ಹಾಕಲಾಯಿತು. ಮಹಾ ಮಂಗಳಾರತಿ ಬಳಿಕ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು ಪ್ರತಿ ವರ್ಷದಂತೆ ಈ ವರ್ಷವೂ ಪೂಜಾ ಕೈಂಕರ್ಯ ಹಾಗೂ ಕೆಂಡೋತ್ಸವ ನಡೆಯಿತು.
ಬಿಜೆಪಿ ಹಿರಿಯ ಮುಖಂಡ ಸಿಮೆಂಟ್ ಮಂಜು ಸೇರಿದಂತೆ ಸಾವಿರಾರು ಭಕ್ತರು ದೇವಿ ದರ್ಶನ ಪಡೆದರು ಬಿಜೆಪಿ ಹಿರಿಯ ಮುಖಂಡ ಸಿಮೆಂಟ್ ಮಂಜು ಪತ್ರಿಕೆಯೊಂದಿಗೆ ಮಾತನಾಡಿ ದೇವಸ್ಥಾನವನ್ನು ಹೆಚ್ಚು ಅಭಿವೃದ್ಧಿ ಪಡಿಸುವ ಸಲುವಾಗಿ ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಗೌಡ ಅವರೊಂದಿಗೆ ದೇವಾಲಯದ ಪದಾಧಿಕಾರಿಗಳ ಸಮ್ಮುಖದಲ್ಲಿ ರಾಜ್ಯ ಮುಜರಾಯಿ ಸಚಿವರಾದ ಶಶಿಕಲಾಜೊಲ್ಲೆಯವರಿಗೆ ಮನವಿ ಮಾಡಲಾಗುವುದು ಈಗಾಗಲೇ ಸಚಿವರು ಹಾಸನಾಂಬ ದೇವಾಲಯದ ಅಭಿವೃದ್ಧಿಗೆ ಮುಂದಾಗಿರುವ ಬಗ್ಗೆ ತಿಳಿದು ಬಂದಿದ್ದು
ಹಾಸನಾಂಬೆ ದೇವರ ಸೋದರಿಯಾದ ಕೆಂಚಾಂಬಿಕೆ ದೇವಸ್ಥಾನಕ್ಕೂ ಮಹತ್ವವಿದೆ. ವರ್ಷದಲ್ಲಿ ಎರಡು ಬಾರಿ ಜಾತ್ರೆ ನಡೆಯುತ್ತದೆ.
ಈ ಸಂದರ್ಭದಲ್ಲಿ ಭಕ್ತಾದಿಗಳಿಗೆ ಅನೇಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ ಅನುದಾನ ನೀಡುವ ನಿರೀಕ್ಷೆ ಇದೆ ಈ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ವಿಪರೀತ ಇದೆ. ಆನೆಗಳು ಮತ್ತು ಮಾನವರ ಸುರಕ್ಷತೆಗಾಗಿ ಸರ್ಕಾರ ಹಾಗೂ ಜನಪ್ರತಿನಿದಿಗಳು ಕ್ರಮ ಕೈಗೊಳ್ಳಬೇಕಾಗಿದೆ ಕೆಂಚಾಂಬಿಕೆ ದೇವಿಯು ರೈತರು, ಸಾರ್ವಜನಿಕರಿಗೆ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.
ತಹಶೀಲ್ದಾರ್ ಕೆ. ಸಿ. ಸೌಮ್ಯ.ಬಿಜೆಪಿ ಹಿರಿಯ ಮುಖಂಡ ಸಿಮೆಂಟ್ ಮಂಜು, ಮಲ್ಲಾಪುರ ಗ್ರಾ. ಪಂ. ಅಧ್ಯಕ್ಷೆ ಕವಿತಾ ಸೇರಿದಂತೆ ಸಾವಿರಾರು ಭಕ್ತರು ದೇವಿ ಪಾದ ಮುಟ್ಟಿ ನಮಸ್ಕರಿಸಿ ದರ್ಶನ ಪಡೆದರು.
ಇದೇ ಸಂದರ್ಭದಲ್ಲಿ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಪಾರ
ಭಕ್ತಾದಿಗಳಿಗೆ ಬಿಜೆಪಿ ಹಿರಿಯ ಮುಖಂಡ ಸಿಮೆಂಟ್ ಮಂಜು ಬೆಂಬಲಿಗರು ಮಜ್ಜಿಗೆ ಹಾಗೂ ಪಾನಕವನ್ನು ವಿತರಿಸಿದರು.
ಆಲೂರು ತಾ. ಕೆಂಚಾಂಬಿಕೆ ದೇವಿ ಜಾತ್ರೆಯಲ್ಲಿ ತಹಶೀಲ್ದಾರ್ ಕೆ. ಸಿ. ಸೌಮ್ಯ.ಬಿಜೆಪಿ ಹಿರಿಯ ಮುಖಂಡ ಸಿಮೆಂಟ್ ಮಂಜುನಾಥ್, ಮಲ್ಲಾಪುರ ಗ್ರಾ. ಪಂ. ಅಧ್ಯಕ್ಷೆ ಕವಿತಾ, ಅಭಿವೃದ್ಧಿ ಸಮಿತಿ ಅಧ್ಯಕ್ಷ ರಘು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.