Sunday, November 24, 2024
Homeಸುದ್ದಿಗಳುಹಾಸನಾಂಬೆ ದೇವಿ ದರ್ಶನಕ್ಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆ

ಹಾಸನಾಂಬೆ ದೇವಿ ದರ್ಶನಕ್ಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆ

ಹಾಸನದ ಅಧಿದೇವತೆ ಹಾಸನಾಂಬೆ ದೇವಿ ದರ್ಶನಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಅಪಾರ ಪ್ರಮಾಣದಲ್ಲಿ ಹರಿದುಬರುತ್ತಿರುವ ಭಕ್ತ ಸಾಗರಕ್ಕೆ ದೇವಿಯ ದರ್ಶನ ಮಾಡಿಸುವಲ್ಲಿ ಪೊಲೀಸರು ಹಾಗೂ ಜಿಲ್ಲಾಡಳಿತ ಹೆಣಗಾಡುತ್ತಿರುವುದು ಕಂಡು ಬರುತ್ತಿದೆ. ನಿರೀಕ್ಷೆಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದು 1000 ರೂ.ಗಳ ಟಿಕೆಟ್‌ನ ವಿಶೇಷ ದರ್ಶನದ ಸರತಿಸಾಲೇ ಕಿ.ಮೀ. ಉದ್ದಕ್ಕೆ ಬೆಳೆಯುತ್ತಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮತ್ತು ಸಂಜೆ 3.30 ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ದರ್ಶನ ಅವಕಾಶ ಇರುವುದರಿಂದ ಭಕ್ತರ ಒತ್ತಡ ಹೆಚ್ಚುತ್ತಿದೆ. ಈ ಹಿಂದಿನಂತೆ ಹಗಲು-ರಾತ್ರಿ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರೆ ನೂಕುನುಗ್ಗಲು ಕಡಿಮೆ ಆಗುತ್ತದೆ ಎಂಬುದು ಭಕ್ತರ ಮನವಿ ಆಗಿದೆ.ಗಣ್ಯರು, ಅತಿಗಣ್ಯರ ಭೇಟಿ ಸಂದರ್ಭದಲ್ಲಿ ಅವರೊಂದಿಗೆ ನೂರಾರು ಮಂದಿ ಅವರ ಹಿಂಬಾಲಕರೂ ದೇವಸ್ಥಾನದ ಒಳಗೆ ನುಗ್ಗುವುದರಿಂದ ಅವರು ನಿಯಂತ್ರಿಸುವುದು ಪೊಲೀಸರಿಗೆ ಹರಸಾಹಸವಾಗುತ್ತಿದೆ. ಈ ಸಂದರ್ಭದಲ್ಲಿ ಸರತಿಸಾಲಿನಲ್ಲಿ ಗಂಟೆಗಟ್ಟಲೆ ನಿಂತು ದೇವಿಯ ದರ್ಶನಕ್ಕಾಗಿ ಕಾಯುತ್ತಿರುವ ಭಕ್ತರಿಗೂ ತೊಂದರೆ ಆಗುತ್ತಿದೆ.

RELATED ARTICLES
- Advertisment -spot_img

Most Popular