ಹಾಸನ : ಸಾಂಪ್ರದಾಯಿಕವಾಗಿ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಗುರುವಾರ ಮುಚ್ಚಲಾಯಿತು.
ಮಧ್ಯಾಹ್ನ 12.47ಕ್ಕೆ ಗರ್ಭಗುಡಿ ಬಾಗಿಲು ಮುಚ್ಚಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಚಿವ ಎಸ್.ಟಿ.ಸೋಮಶೇಖರ್, ಶಾಸಕರುಗಳಾದ ಪ್ರೀತಂಗೌಡ, ಸಿ.ಎನ್.ಬಾಲಕೃಷ್ಣ, ಡಿಸಿ, ಎಸ್ಪಿ ಉಪಸ್ಥಿತಿ ಇದ್ದರು.
ಅ.13 ರಂದು ತೆರೆದಿದ್ದ ಹಾಸನಾಂಬೆ ಗರ್ಭಗುಡಿ ಬಾಗಿಲು ಮುಂದಿನ ವರ್ಷದವರೆಗು ಗರ್ಭಗುಡಿ ಬಾಗಿಲು ಬಂದ್ ಆಗಲಿದೆ. ಮುಂದಿನ ವರ್ಷ 2-11-2023 ರಿಂದ 15-11-2023 ರವರೆಗೆ 13 ದಿನ ಹಾಸನಾಂಬೆ ಜಾತ್ರಾ ಮಹೋತ್ಸವ ನಡೆಯಲಿದೆ.
ಹಾಸನಾಂಬಾ ದೇವಾಲಯದ ಬಾಗಿಲು ಮುಚ್ವಿದ ನಂತರ ದೇವಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ ಗೋಪಾಲಯ್ಯಮಾತನಾಡಿ ಈ ಬಾರಿಯ ಜಾತ್ರಾ ಮಹೋತ್ಸವ ಉತ್ತಮವಾಗಿ ನಡೆದಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.ಹಾಸನಾಂಬಾ ದೇವಿಯ ದರ್ಶನ ಮಹೋತ್ಸವ ಯಶಸ್ವಿಯಾಗಿ ನಡೆದಿದ್ದು,ಆರು ಲಕ್ಷಕ್ಕೂ ಅಧಿಕ ಭಕ್ತಾದಿಗಳು ದೇವಿ ದರ್ಶನ ಮಾಡಿದ್ದಾರೆ ,ಟಿಕೆಟ್ ಹಾಗೂ ಲಾಡು ಮಾರಾಟದಿಂದ 1.70ಕೋಟಿ ಹಣ ಸಂಗ್ರಹ ವಾಗಿದೆ ,ಜಾತ್ರಾ ಮಹೋತ್ಸವ ಅಚ್ಚುಕಟ್ಟಾಗಿ ಸಂಘಟಿಸಿದಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.