ನವೆಂಬರ್ 1, ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಜೆಡಿಎಸ್ ವತಿಯಿಂದ ಮನೆಮನೆಗೆ ನಾಡಧ್ವಜ ಎಂಬ ಅಭಿಯಾನ ಹಮ್ಮಿಕೊಂಡಿದೆ. ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಮಾದರಿಯಲ್ಲಿ ಜೆಡಿಎಸ್ ಈ ಅಭಿಯಾನ ಆರಂಭಿಸಲಿದೆ.
ಅಭಿಯಾನದ ಹಿನ್ನಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಹೆಚ್.ಡಿ. ಕುಮಾರಸ್ವಾಮಿ, ಸೇರಿದಂತೆ ಪಕ್ಷದ ನಾಯಕರು ಜೆಡಿಎಸ್ ಕಚೇರಿಯಲ್ಲಿ, ಸಭೆ ಹಮ್ಮಿಕೊಂಡಿದ್ದು, ಪ್ರಾದೇಶಿಕವಾಗಿ ಪಕ್ಷದ ಶಕ್ತಿ ಹೆಚ್ಚಿಸಿಕೊಳ್ಳಲು ವಿಶೇಷ ಯೋಜನೆ ಹಾಕಿಕೊಂಡಿದೆ. ಮನೆಮನೆಗೆ ನಾಡಧ್ವಜ ಅಭಿಯಾನದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಜೆಡಿಎಸ್ ಸಿದ್ದತೆ ರೂಪಿಸಿಕೊಂಡಿದೆ. ರಾಷ್ಟ್ರಪ್ರೇಮದ ಜತೆಗೆ ರಾಜ್ಯ ಪ್ರೇಮ ಎನ್ನುವ ಸಂದೇಶವನ್ನು ರವಾನಿಸಲು ಜೆಡಿಎಸ್ ಪಕ್ಷ ಮುಂದಾಗಿದೆ.
ಆಗಸ್ಟ್ 15 ರಂದು ನಡೆದ ಹರ್ ಘರ್ ತಿರಂಗ ಅಭಿಯಾನದ ಸಮಯದಲ್ಲಿ ಮನೆಗಳ ಮೇಲೆ ಬಾವುಟ ಹಾರಿಸಲಾಗಿತ್ತು. ಇದೀಗ ನವೆಂಬರ್ 1 ರಿಂದ 15 ದಿನಗಳ ಕಾಲ ಮನೆಯಲ್ಲಿ ಕನ್ನಡ ಬಾವುಟ ಹಾರಿಸಲು ಸಜ್ಜಾಗಿದ್ದಾರೆ.