Monday, April 21, 2025
Homeಸುದ್ದಿಗಳುಹಾನುಬಾಳ್ ಕಸಾಪ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ

ಹಾನುಬಾಳ್ ಕಸಾಪ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ

 

ಸಕಲೇಶಪುರ. ಕನ್ನಡ ಸಾಹಿತ್ಯ ಪರಿಷತ್ತು ಹಾನುಬಾಳ್ ಹೋಬಳಿ ಘಟಕ ವತಿಯಿಂದ ಕನ್ನಡ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿ ಯಾಗಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ‌ ವಿದ್ಯಾನಿಧಿ ಶಾಲ ವಿಧ್ಯಾರ್ಥಿಗಳು ಕನ್ನಡಪರ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಸಭಿಕರನ್ನು ರಂಜಿಸಿದರು . ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ವೈದ್ಯಧಿಕಾರಿ ಡಾ.ರಮೇಶ್, ನರ್ಸ್ ಉಮಾದೇವಿ, ಅಶ್ವಿನಿ ಯವರನ್ನು ಸನ್ಮಾನ ಮಾಡಲಾಯಿತು.
ಅಧ್ಯಕ್ಷತೆಯನ್ನು ಹೋಬಳಿ ಘಟಕದ ಅಧ್ಯಕ್ಷರಾದಂತಹ, ಡಿ.ಎಸ್.ಲೋಕೇಶ್ ಅವರು ವಹಿಸಿದ್ದರು.ಉದ್ಘಾಟನೆಯನ್ನು ತಾಲೂಕು ಘಟಕ ಅಧ್ಯಕ್ಷರಾದಂತಹ ಶಾರದಾ ಗುರುಮೂರ್ತಿರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಖ್ಯಾತ ಸಾಹಿತಿ ಮೈಸೂರು ಬೇರಿಯ ರಾಮ್ ಕುಮಾರ್, ಗ್ರಾ.ಪಂ.ಅಧ್ಯಕ್ಷರಾದ ವಿಮಲರಾಜಯ್ಯ, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಕೀರ್ತಿ ಕಿರಣ್, ರಾಜೀವ್ ಗೌಡ , ಲತಿಫ್, ವಿಜಿಯ ಕುಮಾರ್ ಅರುಣ್, ಎ ಎಸ್. ಮೋಹನ್, ಅಚ್ಚರಡಿ ಮೋಹನ್. ಮುಂತಾದವರು ಉಪಸ್ಥಿತರಿದ್ದರು.

 

RELATED ARTICLES
- Advertisment -spot_img

Most Popular