ಚಿಮು ಚಿಮು ಚಳಿಯ ನಡುವೆ ಕ್ರೀಡೆಯ ಕಿಚ್ಚು ಹಚ್ಚಿ ರಂಜಿಸಿದ..
ಹಾನುಬಾಳ್ ವಾಲಿಬಾಲ್ ಕಪ್: 2023
ಸಕಲೇಶಪುರ: ತಾಲೂಕಿನ ಹಾನು ಬಾಳ್ ಗ್ರಾಮದಲ್ಲಿ ರಾಷ್ಟ್ರೀಯ ಮಟ್ಟದ ಹೊನ್ನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ವಿಜೃಂಭಣೆಯಿಂದ ನಡೆಯಿತು.
ಸ್ಥಳಿಯ ಯುವಕರಾದ ಮುದ್ದ, ಸುಭಾಶ್,, ನವಾಝ್, ಹರೀಶ್, ನೇತೃತ್ವದಲ್ಲಿ ನಡೆದ ಕ್ರೀಡೆ ಮತ್ತು ಸಂಗೀತದ ಜಗಲ್ ಬಂದಿ ಪ್ರೇಕ್ಷಕರ ರಂಜಿಸಿತು.
ಪಂದ್ಯಾವಳಿಯಲ್ಲಿ ಕರ್ನಾಟಕ. ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ಇತರೆ ರಾಜ್ಯಗಳ ಹೆಸರಾಂತ ವಾಲಿಬಾಲ್ ಕ್ರೀಡಾಪಟುಗಳು ಭಾಗವಹಿಸಿದ್ದರು.
ತಾಲ್ಲೂಕು ಮಟ್ಟಕ್ಕೆ ನಡೆದ ಅಂತಿಮ ಪಂದ್ಯದಲ್ಲಿ ಬಾಳ್ಳುಪೇಟೆಯ ಭುವನೇಶ್ವರಿ ತಂಡವು ಹಾನುಬಾಳು ಕೂಡಿಗೆ ಫ್ರೆಂಡ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಭುವನೇಶ್ವರಿ ತಂಡದ ಶಬೀಬ್ ಉತ್ತಮ ಬ್ಲಾಕರ್, ಉತ್ತಮ ಅಟ್ಯಾಕರ್ ಪ್ರನಮ್ ಪ್ರಶಸ್ತಿಗಳಿಸಿದರು.
ಕಾರ್ಯಕ್ರಮದ ಪ್ರಮುಖರಾಗಿ ಡಿ ವೈ ಎಸ್ ಪಿ ಮಿಥುನ್, ಭಾಗವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಬೈರಮುಡಿ ಚಂದ್ರು, ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಮುರಳಿ ಮೋಹನ್, ಪುರಸಭೆಯ ಮಾಜಿ ಅಧ್ಯಕ್ಷ ಸಯ್ಯದ್ ಮುಫಿಜ್, ಬಹುಮಾನ ವಿತರಣೆ ಮಾಡಿದರು.
ವಾಲಿಬಾಲ್ ಪಂದ್ಯ ಹಾನು ಬಾಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಜನರಿಗೆ ರಸದೌತಣ ನೀಡಿತು
ಬಾರಿ ಅಚ್ಚುಕಟ್ಟಾಗಿ ಕ್ರೀಡಾಂಗಣವನ್ನು ನಿರ್ಮಿಸಲ್ಲಾಗಿದ್ದು 5 ಸಾವಿರ ಪ್ರೇಕ್ಷಕರ ಗ್ಯಾಲರಿ ತುಂಬಿತ್ತು
ಮಲೆನಾಡಿನ ಸ್ವರ್ಗ ಸೌಂದರ್ಯದ ಮದ್ಯೆ, ಜನವರಿಯ ಚಮ ಚಮ ಚಳಿ ಯಲ್ಲಿ ಕ್ರೀಡೆ ಮತ್ತು ಸಂಗೀತದ ಜಗಲ್ ಬಂದಿ ಜನರನ್ನು ರಂಜಿಸುವಲ್ಲಿ ಎರಡನೆ ವರ್ಷದ ಕ್ರೀಡೆ ಸಫಲವಾಯಿತು.