Saturday, November 23, 2024
Homeಸುದ್ದಿಗಳುಸಕಲೇಶಪುರಹಾನುಬಾಳು ಗ್ರಾಮ ಪಂಚಾಯಿತಿಯ ಸ್ವಚ್ಛ ಸಂಕೀರ್ಣ ಘಟಕದ ಉದ್ಘಾಟನೆ

ಹಾನುಬಾಳು ಗ್ರಾಮ ಪಂಚಾಯಿತಿಯ ಸ್ವಚ್ಛ ಸಂಕೀರ್ಣ ಘಟಕದ ಉದ್ಘಾಟನೆ


ಸಕಲೇಶಪುರ :ಹಾನುಬಾಳ್ ಕಸವಿಲೇವಾರಿ‌ ಘಟಕವನ್ನು ಎಚ್ ಕೆ ಕುಮಾರಸ್ವಾಮಿ ಅವರು ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾನುಬಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ವಿಮಲಾ ರಾಜಯ್ಯನವರು ವಹಿಸಿದ್ದರು. ಸ್ವಚ್ಛ ಸಂಕೀರ್ಣ ಘಟಕದ ಉದ್ಘಾಟನೆ ಮಾಡಿದ ಶಾಸಕರು ಘಟಕದಲ್ಲಿ ಅಳವಡಿಸಲಾದ ಬೈಲಿಂಗ್ ಯಂತ್ರ ಸ್ಕ್ರೀನಿಂಗ್ ಯಂತ್ರ ಮತ್ತು ಇನ್ಸಿಲೇಟರ್ ಗಳಿಗೆ ಚಾಲನೆ ನೀಡಿದರು. ಪ್ರಥಮವಾಗಿ ಸುಮಾರು 50 ಚೀಲ ಪ್ಲಾಸ್ಟಿಕ್ ಕೇವಲ ಎರಡು 2*2 ಅಳತೆಯ ಬಾಕ್ಸ್ ನಲ್ಲಿ ಇಡುವಂತೆ ಬೇಲ್ ಮಾಡಲಾಯಿತು .ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರು ಸಂತೋಷ್ ಕೆ ಆರ್ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಸುಪ್ರದೀಪ ಯಜಮಾನ ಕುಮಾರಸ್ವಾಮಿ ಮಾಜಿ ತಾಲೂಕ ಪಂಚಾಯಿತಿ ಸದಸ್ಯರಾದ ರಂಗನಾಥ್ ಹಾಗೂ ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರಾದ ಆದಿತ್ಯ ಹೆಚ್ ಎ ಪೊಲೀಸ್ ಆರಕ್ಷಕ ನಿರೀಕ್ಷಕರಾದ ಬಸವರಾಜ್ ರವರು, ಹಾಲಿ ತಾಪಂ ಕೆಡಿಪಿ ಸದಸ್ಯರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ಕುಸುಮ ಭೂಪಾಲ್ ,ಮಾಜಿ ಅಧ್ಯಕ್ಷರುಗಳು ಹಾಗೂ ಹಾಲಿ ಸದಸ್ಯರುಗಳಾದ ಕೇಶವಮೂರ್ತಿ ಮಾಜಿ ಉಪಾಧ್ಯಕ್ಷರಾದ ಶಿಲ್ಪಾ ಪುಟ್ಟರಾಜು, ಸರಳ ಕೇಶವಮೂರ್ತಿ ,ಯೋಗರಾಜ್, ಮೋಹನ್ ಕುಮಾರ್ ಅಚ್ಚರಡಿ, ಪೂರ್ಣ ಪುಟ್ಟಸ್ವಾಮಿ, ಶೈಲಾರುದ್ರೇಶ್ , ಹರಿಣಾಕ್ಷಿ ಮಂಜುನಾಥ್ ಹಾಗೆ ಮಾಜಿ ಅಧ್ಯಕ್ಷರುಗಳಾದ ನೇತ್ರಾವತಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳು ಹಾಲಿ ಸದಸ್ಯರುಗಳು ಹಾಗೆ ವಿವಿಧ ಸಂಘಟನೆಗಳ ಮುಖ್ಯಸ್ಥರುಗಳು ಗ್ರಾಮಸ್ಥರು, ರೆಸರ್ಟ್ ಮಾಲೀಕರ ಸಂಘದ ಪದಾಧಿಕಾರಿಗಳು, ಉಪಾಧ್ಯಕ್ಷರು ಕ್ಯಾಮನಹಳ್ಳಿ ಹಾಗೂ ದೇವಲದಕೆರೆ ಸದಸ್ಯರು ಹಾಜರಿದ್ದರು. ಪ್ರಾಸ್ತಾವಿಕವಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಆದಿತ್ಯ ಸಹಾಯಕ ನಿರ್ದೇಶಕರು ಸ್ವಚ್ಛ ಭಾರತ್ ಮಿಷನ್ ನಡೆಯಲಿ ಇರುವ ಅನುದಾನ ಹಾಗೂ ಕಸ ನಿರ್ವಹಣೆಯಲ್ಲಿ ಗ್ರಾಮ ಪಂಚಾಯಿತಿಯರು ನಿರ್ವಹಿಸಬೇಕಾದ ಕಾರ್ಯವನ್ನು ತಿಳಿಸಿದರು.ಸಭೆಯಲ್ಲಿ ಮಾತನಾಡಿದಂತಹ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಸುಪ್ರದೀಪ ಯಜಮಾನ್ ಕಸವನ್ನು ಪ್ರಥಮವಾಗಿ ಮನೆಯಲ್ಲಿ ವಿಂಗಡಿಸಿ ನೀಡಿದಲ್ಲಿ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಮತ್ತು ಹೊರೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು. ಗ್ರಾ.ಪಂ ಮೋಹನ್ ಕುಮಾರ್ ಅಚ್ಚರಡಿ ಕಸ ವಿಲೇವಾರಿ ಘಟಕ ನಿರ್ಮಿಸಲು ಗ್ರಾಮ ಪಂಚಾಯಿತಿ ಪಟ್ಟಿರುವ ಶ್ರಮ ಹಾಗೂ ಅನುದಾನವನ್ನು ಸಭೆಗೆ ತಿಳಿಸಿದರು ಮುಂದಿನ ದಿನದಲ್ಲಿ ಇದನ್ನು ಹಾಗೂ ಹಾನುಬಾಳು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಮಾನ್ಯ ಶಾಸಕರಲ್ಲಿ ಕೋರಿಕೆ ಸಲ್ಲಿಸಿದರು ಕಾರ್ಯಕ್ರಮದ ಕೊನೆಯಲ್ಲಿ ಮಾನ್ಯ ಶಾಸಕರು ಮಾತನಾಡಿ ಹಾನುಬಾಳು ಗ್ರಾಮ ಪಂಚಾಯಿತಿ ಸಕಲೇಶಪುರ ತಾಲೂಕಿನಲ್ಲಿ ದೊಡ್ಡ ಪಂಚಾಯಿತಿಯಾಗಿದ್ದು ಸುತ್ತಮುತ್ತ ಪ್ರವಾಸೋದ್ಯಮ ಹೆಚ್ಚಿಸಲು ರೆಸಾರ್ಟ್, ಹೋಂಸ್ಟೇ ಗಳು ಈ ತ್ಯಾಜ್ಯ ವಿಲೇವಾರಿಯಲ್ಲಿ ತಮ್ಮದೇ ಜವಾಬ್ದಾರಿಯನ್ನು ನಿರ್ವಹಿಸಲು ಸೂಚಿಸಿದರು ಎಲ್ಲರೂ ಸಹ ತಮ್ಮ ತಮ್ಮ ವ್ಯಾಪ್ತಿಯಲ್ಲಿಯೇ ಹಸಿ ಕಸವನ್ನು ವಿಂಗಡಿಸಿ ವಿಲೇವಾರಿ ಮಾಡಿದಲ್ಲಿ ಗ್ರಾಮ ಪಂಚಾಯಿತಿಗೆ ಕಸ ನಿರ್ವಹಣೆ ಸಮಸ್ಯೆ ಮುಕ್ತಾಯವಾಗುತ್ತದೆ ಉತ್ಪಾದನೆ ಆಗಿರುವ ಒಣ ಕಸ ಮಾತ್ರ ಗ್ರಾಮ ಪಂಚಾಯಿತಿಯ ಆಟೋಗಳಿಗೆ ನೀಡುವುದು ಇದನ್ನು ಕಟ್ಟುನಿಟ್ಟಾಗಿ ಆಗಿ ಪಾಲಿಸಲು ಎಲ್ಲಾ ಸಂಘ-ಸಂಸ್ಥೆಯ ಮುಖ್ಯಸ್ಥರಿಗೆ ಸಲಹೆ ನೀಡಿದರು ಮುಂದುವರೆದು ಈ ಘಟಕಕ್ಕೆ ಹೆಚ್ಚುವರಿಯಾಗಿ ಅನುದಾನ ಅವಶ್ಯಕ ಉಂಟಾದಲ್ಲಿ ಶಾಸಕರ ಅನುದಾನದಲ್ಲಿ ಅನುದಾನ ನೀಡಲಾಗುವುದು ಎಂದು ತಿಳಿಸಿದರು ಮುಂದಿನ ದಿನದಲ್ಲಿ ಇನ್ನು ಯಶಸ್ವಿಯಾಗಿ ಈ ಘಟಕ ನಿರ್ವಹಣೆಯಾಗಲಿ ಹಾಗೂ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಬೇಲಿಂಗ್ ಮತ್ತು ಸ್ಕ್ರೀನಿಂಗ್ ಯಂತ್ರಗಳನ್ನು ಅಳವಡಿಸಿ ಕಸ ನಿರ್ವಹಣೆಯನ್ನು ಪ್ರಾರಂಭಿಸಿರುವ ಹಾನುಬಾಳು ಗ್ರಾಮ ಪಂಚಾಯಿತಿಯ ಎಲ್ಲಾ ಆಡಳಿತ ಮಂಡಳಿಯನ್ನು ಮಾನ್ಯ ಶಾಸಕರು ಅಭಿನಂದಿಸಿದರು.

RELATED ARTICLES
- Advertisment -spot_img

Most Popular