Sunday, January 25, 2026
Homeಸುದ್ದಿಗಳುರಾಜ್ಯಹಂಸಲೇಖ ಅರೋಗ್ಯವಾಗಿದ್ದಾರೆ : ಸ್ಪಷ್ಟನೆ ನೀಡಿದ ಕುಟುಂಬ.

ಹಂಸಲೇಖ ಅರೋಗ್ಯವಾಗಿದ್ದಾರೆ : ಸ್ಪಷ್ಟನೆ ನೀಡಿದ ಕುಟುಂಬ.

ಬೆಂಗಳೂರು : ಸ್ಯಾಂಡಲ್‌ವುಡ್ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha ) ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸುದ್ದಿ ಹಬ್ಬಿತ್ತು. ಈ ಕುರಿತು ಹಂಸಲೇಖ ಪುತ್ರಿ ಮತ್ತು ಪತ್ನಿ ಅವರ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅವರ ಆರೋಗ್ಯ ಚೆನ್ನಾಗಿಯೇ ಇದೆ. ಸಂಜೆ ವೇಳೆಗೆ ಆಪ್ತರನ್ನು ಭೇಟಿ ಮಾಡಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಎದೆ ನೋವು ಕಾಣಿಸಿಕೊಂಡಿರುವುದಾಗಿ ಸುದ್ದಿ ಹಬ್ಬಿತ್ತು. ರಾಜಾಜಿನಗರದ ಫಸ್ಟ್ ಬ್ಲಾಕ್‌ನಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ನಾದಬ್ರಹ್ಮ ಹಂಸಲೇಖ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗುತ್ತಿತ್ತು. ಸಂಗೀತ ಹಾಗೂ ಸಾಹಿತ್ಯದಿಂದ ನಾದಬ್ರಹ್ಮ ಅಸಂಖ್ಯಾತ ಅಭಿಮಾನಗಳ ಮನಗೆದಿದ್ದಾರೆ.

RELATED ARTICLES
- Advertisment -spot_img

Most Popular