ರೋಟರಿ ಸಂಸ್ಥೆ ಹಾನುಬಾಳ್ ಘಟಕದ ವತಿಯಿಂದ ನಡೆಯುತ್ತಿರುವ ಬಂದೂಕು ತರಬೇತಿ ಶಿಬಿರದಲ್ಲಿ ಕೆಲ ಕಾಲ ಬಾಗಿಯಾದ ಶಾಸಕ ಎಚ್.ಕೆ ಕುಮಾರಸ್ವಾಮಿ
ತಾಜಾ ಸುದ್ದಿ
ಬಂದೂಕನ್ನು ದುರ್ಬಳಕೆ ಮಾಡದೆ ಸದ್ಬಳಕೆ ಮಾಡಿಕೊಳ್ಳಿ ಎಂದ ಶಾಸಕ ಎಚ್ ಕೆ ಕುಮಾರಸ್ವಾಮಿ
ಸಕಲೇಶಪುರ: ಬಂದೂಕನ್ನು ಬೇರೆಯವರ ಮೇಲೆ ಪ್ರಯೋಗ ಮಾಡುವುದಕ್ಕಿಂತ ಸ್ವರಕ್ಷಣೆಗಾಗಿ ಬಳಸಬೇಕು ಎಂದು ಶಾಸಕರು ಹೇಳಿದರು.
ಪಟ್ಟಣದ ಸುಭಾಷ್ ಮೈದಾನದಲ್ಲಿ ಹಾನುಬಾಳ್ ರೋಟರಿ ಸಂಸ್ಥೆ ವತಿಯಿಂದ ನಡೆಯುತ್ತಿರುವ ಬಂದೂಕು ತರಬೇತಿ ಶಿಬಿರಕ್ಕೆ ಭೇಟಿ ನೀಡಿದ ಶಾಸಕರು ನಂತರ ಮಾತನಾಡಿ ಬಂದೂಕನ್ನು ಯಾರು ಬೇಕಾದರು ಬಳಸಬಹುದಾಗಿದೆ. ಆದರೆ ಬಂದೂಕನ್ನು ಬಳಸಲು ಲೈಸೆನ್ಸ್ ಪಡೆಯಬೇಕಾಗಿರುವುದು ಅತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರ ಅನುಕೂಲಕ್ಕಾಗಿ ಹಾನುಬಾಳ್ ರೋಟರಿ ಸಂಸ್ಥೆ ಬಂದೂಕು ತರಬೇತಿ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಈ ಸಂಧರ್ಭದಲ್ಲಿ ಬಂದೂಕು ತರಬೇತಿದಾರ ರಮೇಶ್, ಹಾನುಬಾಳ್ ರೋಟರಿ ಸಂಸ್ಥೆ ಅಧ್ಯಕ್ಷ ಚಿಮ್ಮಿಕೂಲ್ ಅನಿಲ್, ಕಾರ್ಯದರ್ಶಿ ಸಂದೇಶ್ ಕೀರ್ತಿ ಇತರರು ಹಾಜರಿದ್ದರು.