Saturday, November 23, 2024
Homeಸುದ್ದಿಗಳುಬೈರಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಸವಿತಾ ರಂಗಸ್ವಾಮಿ ಆಯ್ಕೆ

ಬೈರಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಸವಿತಾ ರಂಗಸ್ವಾಮಿ ಆಯ್ಕೆ

ಆಲೂರು : ಬೈರಾಪುರ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಉಪಾಧ್ಯಕ್ಷೆ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಸದಸ್ಯೆ ಸವಿತಾ ರಂಗಸ್ವಾಮಿಯವರು ಅವಿರೋಧವಾಗಿ ಆಯ್ಕೆಯಾದರು.

ಆಲೂರು ತಾಲ್ಲೂಕಿನ ಕಸಬಾ ಹೋಬಳಿ ಬೈರಾಪುರ ಗ್ರಾಮಪಂಚಾಯಿತಿ ಸಾಮಾನ್ಯ ಮಹಿಳೆ ಉಪಾಧ್ಯಕ್ಷೆ ಸ್ಥಾನಕ್ಕೆ ಹಿಂದೆ ಅಧ್ಯಕ್ಷ ರಾಗಿದ್ದ ಹೇಮಾ ಮಂಜೇಗೌಡ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದಿಂದ ಮನನೊಂದು ರಾಜೀನಾಮೆ ನೀಡಿದ್ದ.ರು ತೆರವಾಗಿದ್ದ ಸ್ಥಾನಕ್ಕೆ ಸವಿತಾ ರಂಗಸ್ವಾಮಿಯವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಒಬ್ಬರೆ ನಾಮಪತ್ರ ಸಲ್ಲಿಸಿದ್ದು,ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ಪರಿಶೀಲಿಸಿ ಕೋರಂ ಸಾಬೀತುಪಡಿಸಲು ತಿಳಿಸಿದಾಗ ಒಟ್ಟು ಹದಿನೈದು ಸದಸ್ಯರಲ್ಲಿ ಒಂಬತ್ತು ಜನ ಸದಸ್ಯರು ಬೆಂಬಲಿಸುವುದರ ಮೂಲಕ ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆಮಾಡಲಾಯಿತು.

ಬಿಜೆಪಿ ಬೆಂಬಲಿತ ಗಣೇಶ್ ಎಂಬ ಸದಸ್ಯರ ಕಾಲು ಮುರಿದಿದ್ದರು ಕುಂಟುತ್ತಲೆ ಪಂಚಾಯಿತಿ ಮೆಟ್ಟಿಲೇರಿ ಉಪಾಧ್ಯಕ್ಷರಿಗೆ ಬೆಂಬಲ ಸೂಚಿಸಿದರೆ ಜೆಡಿಎಸ್ ಪಕ್ಷದ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಅವರ ಬೆಂಬಲಿತ ಸದಸ್ಯರು ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸದೇ ದೂರ ಉಳಿದಿದ್ದು ವಿಧಾನಸಭೆ ಚುನಾವಣೆ ಹೊತ್ತಲ್ಲಿ ಜೆಡಿಎಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಎತ್ತಿ ತೋರುತ್ತಿತ್ತು.

ಕಾರ್ಯನಿರ್ವಾಹಕ ಅಧಿಕಾರಿ ಎನ್.ನಾರಾಯಣ ಸ್ವಾಮಿ ಮಾತನಾಡಿ ಪಂಚಾಯತ್ ರಾಜ್ ಕಾಯಿದೆ ಅನ್ವಯ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ಅವಕಾಶ ಕಲ್ಪಿಸಿದ್ದು ಆಯ್ಕೆಗೊಂಡ ಸದಸ್ಯರು ಪಂಚಾಯತಿ ವ್ಯಾಪ್ತಿಯ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಗ್ರಾಮೀಣ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಉತ್ತಮ ಆಳ್ವಿಕೆಯನ್ನು ನೆಡೆಸಬೇಕು ಎಂದರು.

ಈ ಸಂಧರ್ಭದಲ್ಲಿ ಗ್ರಾಮಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಹೇಮಮಂಜೇಗೌಡ,ಬಿಜೆಪಿ ಬೆಂಬಲಿತ ಸದಸ್ಯರಾದ ಗಣೇಶ್,ನಂಜುಂಡಪ್ಪ,ರೇಖಾ,ಪುಟ್ಟಗೌರಮ್ಮ,ಜಯಕುಮಾರ್,ಮೋಹನ್,ನಾಗರತ್ನ,ಗ್ರಾ.ಪಂ ಮಾಜಿ ಅಧ್ಯಕ್ಷ ವೀರಭದ್ರಸ್ವಾಮಿ.ಮಾಜಿ ಉಪಾಧ್ಯಕ್ಷ ನಂದೀಶ್,ಜೆಡಿಎಸ್ ಮುಖಂಡರಾದ ಮಂಜೇಗೌಡ,ಚುನಾವಣಾ ಅಧಿಕಾರಿಗಳಾದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ನಾರಾಯಣ ಸ್ವಾಮಿ,ಅಶೋಕ್,ಅಭಿವೃದ್ಧಿ ಅಧಿಕಾರಿ ಅಶೋಕ್,ಸಿಬ್ಬಂದಿಗಳಾದ ಜಯಪ್ರಕಾಶ್,ಚೈತ್ರ,ಕೃಷ್ಮ,ಮಂಜುಳ.ಸಂಗೀತಾ,ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular