ರೆಸಾರ್ಟ್ನ ಈಜುಕೊಳದಲ್ಲಿ ಮುಳುಗಿ ಬಾಲಕಿ ಸಾವು
ಬೇಲೂರು : ತಾಲ್ಲೂಕಿನ ಬಿಕ್ಕೋಡು ಸಮೀಪ ಗ್ರೀನ್ ಪ್ಲಾಸ್ಟರ್್ರ ರೆಸಾರ್ಟ್ನಲ್ಲಿ ಖುಷಿ(12) ಎಂಬ ಬಾಲಕಿ ಈಜುಕೊಳಕ್ಕೆ ಬಿದ್ದು ಮೃತಪಟ್ಟಳು.
ಬೆಂಗಳೂರು ಮೂಲದ ಧನರಾಜ್ ತಮ್ಮ ಕುಟುಂಬದವರೊಂದಿಗೆ ರೆಸಾರ್ಟ್ಗೆ ಬಂದಿದ್ದರು, ಎಲ್ಲರೂ ಮಧ್ಯಾಹ್ನ ಊಟ ಮಾಡುವ ಸಂದರ್ಭದಲ್ಲಿ ರಿಷಿ ಮತ್ತು ಖುಷಿ ಈಜುಕೊಳಕ್ಕೆ ಆಟವಾಡಲು ಹೋಗಿದ್ದರು. ಇದನ್ನು ಗಮನಿಸಿದ ಸಹರಾ(10) ಧನರಾಜ್ರಿಗೆ ತಿಳಿಸಿದರು.
ಕೂಡಲೆ ರಿಷಿ ಮತ್ತು ಖುಷಿಯನ್ನು ಮೇಲಕ್ಕೆ ಎತ್ತಿದರು. ಖುಷಿ ನೀರು ಕುಡಿದು ಮೃತಪಟ್ಟಿದ್ದು, ರಿಷಿ ಅಪಾಯದಿಂದ ಪಾರಾಗಿದ್ದಾನೆ. ಘಟನೆ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.