*BREAKING NEWS
ರಾಜ್ಯದ ಮಹಿಳೆಯರಿಗೆ ನಾಳಿನಿಂದಲೇ ಉಚಿತ ಬಸ್ ಪ್ರಯಾಣ ಜಾರಿ : ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ*
ಮಂಗಳವಾರ ಶಾಂತಿನಗರದ ಕೆಎಸ್ಆರ್‌ಟಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ಸಾರಿಗೆ ಅಧಿಕಾರಿಗಳು ಮೂರ್ನಾಲ್ಕು ಆಯ್ಕೆಗಳನ್ನು ಕೊಟ್ಟಿದ್ದಾರೆ. ಇವನ್ನು ನಾಳಿನ ಸಂಪುಟ ಸಭೆಯಲ್ಲಿ ಮಂಡಿಸುತ್ತೇನೆ. ಕಂಡಿಷನ್ ಬಗ್ಗೆ ಸರ್ಕಾರ ಹೇಳಲಿ ಆದ್ರೆ ಎಲ್ಲಾ ಮಹಿಳೆಯರಿಗೆ ಉಚಿತ ಅನ್ನೋದು ಪ್ರಣಾಳಿಕೆಯಾಗಿತ್ತು ಅದರಂತೆ ಗ್ಯಾರಂಟಿ ಜಾರಿಯಾಗಲಿದೆ ಎಂದರು. ನಾಳೆ ಉಚಿತ ಬಸ್ ಪ್ರಯಾಣ ಗ್ಯಾರಂಟಿ ಜಾರಿಗೆ ಬರೋದ್ರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.*