ಸಕಲೇಶಪುರ : ಪುಟಾಣಿ ಮಕ್ಕಳಿಗೆ ರೈತ ಎಂದರೆ ಯಾರು ಕೃಷಿ ಎಂದರೇನು ಅದರ ವಿಶೇಷತೆಗಳೇನು, ಅದನ್ನು ಹೇಗೆ ಮಾಡಬೇಕು ಎಂಬುದರ ಸ್ಪಷ್ಟ ಪರಿಕಲ್ಪನೆ, ತೋರಿಸಬೇಕು ಎಂಬ ಉದ್ದೇಶದಿಂದ ಒಲಂಪಸ್ ಶಾಲೆಯ ಮಕ್ಕಳನ್ನು ವಾರದ ಸಂತೆಗೆ ಕರೆದುಕೊಂಡು ಹೋಗಿ ವಿಭಿನ್ನವಾಗಿ ರೈತ ದಿನಾಚರಣೆ ಆಚರಿಸಿಲಾಯಿತು ಎಂದು ಒಲಂಪಸ್ ಶಾಲೆಯ ಮುಖ್ಯಸ್ಥೆ ಸಮತ ಹೇಳಿದರು
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಭಾರತದ 5 ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ಗೌರವಿಸಲು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ್ ಅನ್ನು ಆಚರಿಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಖರೀದಿ ಮಾರುಕಟ್ಟೆ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವ ಕಾಲಘಟ್ಟದಲ್ಲಿ ಮಕ್ಕಳನ್ನು ಸಂತೆಗೆ ಕರೆದುಕೊಂಡು ಬಂದು ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಕಾಣ್ಣಾರೆ ನೋಡಿದಲ್ಲದೆ ತಮಗೆ ಇಷ್ಟವಾದ ತರಕಾರಿಗಳನ್ನು ಮಕ್ಕಳು ಸ್ವತಃ ಖರೀದಿ ಮಾಡಲು ಉತ್ತೇಜಿಸಲಾಯಿತು. ಇದರಿಂದ ಮಕ್ಕಳು ವ್ಯವಹಾರಿಕ ಜ್ಣಾನವನ್ನು ಹೆಚ್ಚಿಸಿಕೊಳ್ಳಲಿ ಎಂಬ ಉದ್ದೇಶಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರೈತ ದಿನವನ್ನು ಆಚರಿಸಲು ಯಾವುದೇ ವಿಶೇಷ ಖರ್ಚುಗಳನ್ನು ಮಾಡುವ ಅಥವಾ ಈವೆಂಟ್‌ನಲ್ಲಿ ಭಾಗವಹಿಸುವ ಅಗತ್ಯವಿಲ್ಲ ಎಂಬುವುದನ್ನು ಮಕ್ಕಳಿಗೆ ತೋರಿಸಿ ಕೊಟ್ಟಿದ್ದೇವೆ.
ಒಲಂಪಸ್ ಶಾಲೆಯು ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಇತರೆ ಶಾಲೆಗೆ ವಿಭಿನ್ನವಾಗಿ ನಮ್ಮ ಶಾಲೆ ನಡೆಯುತ್ತಿದೆ, ಮುಂದಿನ ವರ್ಷದ ಶೈಕ್ಷಣಿಕ ವರ್ಷದ ನೊಂದಣಿಯನ್ನು ಮುಂದಿನ ಜನವರಿ ತಿಂಗಳಿಂದ ಪ್ರಾರಂಭಿಸಿಲಾಗುವುದು ಮೊದಲು ಬಂದ ಮಕ್ಕಳಿಗೆ ಅದ್ಯತೆ ಇರುವುದಾಗಿ ಈ ವೇಳೆ ಹೇಳಿದರು