Sunday, November 24, 2024
Homeಸುದ್ದಿಗಳುರಾಜ್ಯಸಕಲೇಶಪುರ ಕಾಡಾನೆ ಸಮಸ್ಯೆ ಬಗೆಹರಿಸಲು ಸೋಮವಾರ ತಾಲೂಕಿಗೆ ತಜ್ಞರ ತಂಡ ಭೇಟಿ

ಸಕಲೇಶಪುರ ಕಾಡಾನೆ ಸಮಸ್ಯೆ ಬಗೆಹರಿಸಲು ಸೋಮವಾರ ತಾಲೂಕಿಗೆ ತಜ್ಞರ ತಂಡ ಭೇಟಿ

ಕಾಡಾನೆ ಸಮಸ್ಯೆ ಬಗೆಹರಿಸಲು ತಜ್ಞರ ತಂಡ ಸಕಲೇಶಪುರಕ್ಕೆ ಭೇಟಿ
ಸಕಲೇಶಪುರ: ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಮಾನವ ಪ್ರಾಣಿ ಸಂಘರ್ಷದಿಂದ ಉಂಟಾಗಿರುವ ಪ್ರಾಣ ಹಾನಿ ಮತ್ತು ವನ್ಯ ಪ್ರಾಣಿಗಳಿಂದ ಆಗಿರುವ ಬೆಳೆ ನಾಶ ಹಾಗೂ ಇನ್ನಿತರೇ ಮಾನವ ಪ್ರಾಣಿ ಸಂಘರ್ಷಕ್ಕೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ, ಈ ಸಮಸ್ಯೆಗೆ ಪರಿಹಾರ ಕ್ರಮಗಳನ್ನು ಒಳಗೊಂಡ ಒಂದು ವಿಸ್ತ್ರತವಾದ ವರದಿಯನ್ನು ಸಲ್ಲಿಸಲು ರಚಿಸಲಾಗಿದ್ದ ತಂಡವನ್ನು ಈ ಕೆಳಕಂಡಂತೆ ಮಾರ್ಪಡಿಸಿ ರಚಿಸಲಾಗಿದೆ..

ಸದರಿ ತಂಡವು ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾನವ – ಪ್ರಾಣಿ ಸಂಘರ್ಷಕ ಒಳಪಟ್ಟಿ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ಕೈಗೊಂಡು, ಶಿಫಾರಸುಗಳನ್ನೊಳಗೊಂಡಂತೆ ವಿಸ್ತ್ರತವಾದ ವರದಿಯನ್ನು ಸಲ್ಲಿಸುತ್ತದೆ. ತಂಡದ ಮುಖ್ಯಸ್ಥರಾಗಿ ರಾಜಕಿಶೋರ್ ಸಿಂಗ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ,
(ಅರಣ್ಯಪಡೆ ಮುಖ್ಯಸ್ಥರು) 2. ರಂಗರಾವ್, ಜಿ.ವಿ,ಪ್ರಧಾನ ಮುಖ್ಯ: ಸಂರಕ್ಷಣಾಧಿಕಾರಿ (NFAP & BM) ಅರಣ್ಯ ಸದಸ್ಯರು

3.ಪ್ರೋ. ನಿಶಾಂತ್, IISC
4.NCF ಸಂಸ್ಥೆಯ ಒಬ್ಬ ಪುತಿನಿಧಿ
5.WTI ಸಂಸ್ಥೆಯ ಒಬ್ಬ ಪ್ರತಿನಿಧಿ
6.ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ವೃತ್ತ
7.ಅರಣ್ಯ ಸಂರಕ್ಷಣಾಧಿಕಾರಿ, ಹಾಸನ ವೃತ್ತ

8.ಶ್ರೀಮತಿ ಶಾಶ್ವತಿ ಮಿಶ್ರಾ,ಸಮನ್ವಯ
ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ಆನೆ ಯೋಜನೆ)ಅಧಿಕಾರಿಗಳ
ತಂಡವು ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾನವ-ಪ್ರಾಣಿ ಸಂಘರ್ಷಕ್ಕೆ ಒಳಪಟ್ಟ ಪ್ರದೇಶಗಳಿಗೆ ಭೇಟಿ ನೀಡಿ ಪ್ರಸ್ತುತ ಅನುಷ್ಠಾನಗೊಳ್ಳುತ್ತಿರುವ ಪರಿಹಾರೋಪಾಯಗಳು, ಕ್ರಮಗಳ ಅಧ್ಯಯನ ಕೈಗೊಂಡು, ಮಾನವ ಸಂಘರ್ಷ ತಡೆಗಟ್ಟಲು ಶಿಫಾರಸ್ಸು ಗಳನ್ನೊಳಗೊಂಡಂತೆ ವಿಸ್ತ್ರತವಾದ ವರದಿಯನ್ನು‌ ಒಂದು ವಾರದಲ್ಲಿ ಸರ್ಕಾರಕ್ಕೆ, ಸಲ್ಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಯನ ತಂಡವು‌ ದಿನಾಂಕ 7-11-2022 ರಂದು ಹಾಸನಕ್ಕೆ ತೆರಳಿ ಬೆಳಿಗ್ಗೆ 10.00 ಗಂಟೆಗೆ ಆನೆ ಮಾನವ ಸಂಘರ್ಷದ ಬಗ್ಗೆ ಪ್ರಾತ್ಯಕ್ಷಿಕೆ ಅಧಿಕಾರಿ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಲಿದೆ.ನಂತರ ಸಕಲೇಶಪುರ ತಾಲ್ಲೂಕಿನ ಬೆಳಗೋಡು ಕ್ಷೇತ್ರಕ್ಕೆ ಭೇಟಿ ನೀಡಿ ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರೊಂದಿಗೆ ಸಭೆ‌ ನಡೆಉ ಯೋಜಿಸಲಾಗಿದ್ದು.ನಂತರ ತಂಡ ನಾಗವಾರ ಹಿನ್ನೀರಿನ ಪ್ರದೇಶದಲ್ಲಿನ ರೈಲ್ವೆ ಬ್ಯಾರಿಕೇಡ್ ನಿರ್ಮಿಸುತ್ತಿರುವ ಕ್ಷೇತ್ರಕ್ಕೆ ಭೇಟಿ ನೀಡಿ ಮತ್ತು ಮಾದಿಹಳ್ಳಿ, ಭರತ್ತೂರು, ನಾಗವಾರ ಗ್ರಾಮಗಳ ಗ್ರಾಮಸ್ಥರೊಂದಿಗೆ ಸಂವಾದ ನಡೆಸಲಿದೆ. ಸಂಜೆ ಚಂಗಡಿಹಳ್ಳಿ-ಯಸಳೂರು ಕ್ಷೇತ್ರಗಳಿಗೆ ಭೇಟಿ ನೀಡಿ ವಾಸ್ತವ್ಯ ಹೂಡಲಿದೆ. ದಿನಾಂಕ 08-11-2022 ರಂದು ತಂಡವು ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳೊಂದಿಗೆ ಮತ್ತು ತಂಡದ ಸದಸ್ಯರೊಂದಿಗೆ ಚರ್ಚೆ ನಡೆಸಲಿದೆ. ಕೊಡಗು ಜಿಲ್ಲೆಗೆ ತೆರಳಿ ಅರಣ್ಯಾಧಿಕಾರಿಗಳೊಂದಿಗೆ ಮತ್ತು ತಂಡದ ಸದಸ್ಯರೊಂದಿಗೆ ಸಭೆ ನಡೆಸಲಿದೆ.ನಂತರ ಮಾನವ-ವನ್ಯಪ್ರಾಣಿ ಸಂಘರ್ಷ ತಡೆಗಟ್ಟಲು ದುಬಾರೆ, ಎಡವನಾಡು, ಸಿದ್ಧಾಪುರ, ಅತ್ತೂರು ಮತ್ತು ನೆಲ್ಲಿಹುದಿಕೇರಿ ಗ್ರಾಮಗಳ ವ್ಯಾಪ್ತಿಯಲ್ಲಿನ ಕಾಫಿ ತೋಟ ರೈತರೊಂದಿಗೆ ಚರ್ಚೆ ಮತ್ತು ಮಡಿಕೇರಿ ಮತ್ತು ವಿರಾಜಪೇಟೆ ವಿಭಾಗದಲ್ಲಿ ಕ್ಷೇತ್ರ ತಪಾಸಣೆ ಮತ್ತು ವಾಸ್ತವ್ಯ ಹೂಡಲಿದೆ.
ದಿನಾಂಕ 09-11-2022_ರಂದು ಮಡಿಕೇರಿ ವನ್ಯಜೀವಿ, ವಿರಾಜಪೇಟೆ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಆನೆ ಕಾರಿಡಾರ್‌ಗಳ ಕ್ಷೇತ್ರ ತಪಾಸಣೆ ನಡೆಸಿ ನಂತರ ಕೇಂದ್ರಸ್ಥಾನಕ್ಕೆ ಹಿಂತಿರುಗಲಿದೆ.

RELATED ARTICLES
- Advertisment -spot_img

Most Popular