ಸಕಲೇಶಪುರ: ಅಳಿವಿಂಚಿನಲ್ಲಿರುವ ವನ್ಯಪ್ರಾಣಿಯಾದ ಕಡವೆಯೊಂದನ್ನು ಕೊಂದು ತನ್ನ ಮನೆಯಲ್ಲಿ ಶೇಖರಿಸಿ ಇಟ್ಟಿದ್ದ ಆರೋಪಿಯೋರ್ವನನ್ನು ಮಾಂಸ ಸಮೇತ ಯಸಳೂರು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲ್ಲೂಕಿನ ಹೆತ್ತೂರು ಹೋಬಳಿ ಹೊಸಹಳ್ಳಿ ಗ್ರಾಮದ ನಿವಾಸಿಯಾದ ಪ್ರಮೋದ್ ಬಿನ್ ಹೆಚ್. ಡಿ ಮಂಜುನಾಥ ರವರ ಮನೆಯ ರೆಫ್ರಿಜಿರೇಟರ್ ನಲ್ಲಿ ಸುಮಾರು 0.900 ಕೆ ಜಿ ತೂಕದ ತುಂಡು ಮಾಡಿದ ಕಡವೆಯ ಹಸಿ ಮಾಂಸವನ್ನು ಶೇಖರಿಸಿಟ್ಟದ್ದ ಬಗ್ಗೆ ಖಚಿತ ಮಾಹಿತಿಯೊಂದಿಗೆ ಸುರೇಶ್ ಸಿ.ಎನ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ, ಜಗದೀಶ್ ಜಿ .ಆರ್ ವಲಯ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿ ಪ್ರಮೋದ್ ಬಿನ್ ಎಚ್. ಡಿ ಮಂಜುನಾಥ ರನ್ನು ಮಾಂಸ ಸಮೇತ ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಕಲಂ 2(16), 2(20), 2(36), 9, 39, 50 ಮತ್ತು 51 ರ ಪ್ರಕಾರ ಬಂಧಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದು ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳದ ವಿಜಯ ಕುಮಾರ ಜಿ ಎಸ್, ನರಸಿಂಹ ಮೂರ್ತಿ ಕೆ, ಗಸ್ತು ವನಪಾಲಕರಾದ ನವೀನ್ ಕುಮಾರ್ ಎಸ್.ಆರ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.