Sunday, November 24, 2024
Homeಸುದ್ದಿಗಳುಜಾನುವಾರುಗಳಿಗೆ ಚರ್ಮಗಂಟು ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಾನುವಾರು ಜಾತ್ರೆ/ಸಂತೆ/ಸಾಗಾಣಿಕೆ ಒಂದು ತಿಂಗಳು‌ ನಿಷೇದ

ಜಾನುವಾರುಗಳಿಗೆ ಚರ್ಮಗಂಟು ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಾನುವಾರು ಜಾತ್ರೆ/ಸಂತೆ/ಸಾಗಾಣಿಕೆ ಒಂದು ತಿಂಗಳು‌ ನಿಷೇದ

 

ಜಾನುವಾರುಗಳಿಗೆ ಚರ್ಮಗಂಟು ರೋಗ (Lympy Skin disease) ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಾನುವಾರು ಜಾತ್ರೆ/ಸಂತೆ/ಸಾಗಾಣಿಕೆ ಒಂದು ತಿಂಗಳು‌ ನಿಷೇದ
ಹಾಸನ: ಜಿಲ್ಲೆಯ ಆಲೂರು ತಾಲ್ಲೂಕಿನ ಹೋತನಹಳ್ಳಿ ಪುರ ಗ್ರಾಮದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿರುತ್ತದೆ. ಇದು ಒಂದು ವೈರಾಣುನಿಂದ ಹರಡುವ ರೋಗವಾಗಿದ್ದು ಹಾಗೂ ಪ್ರಮುಖವಾಗಿ ಸೊಳ್ಳೆ, ನೊಣ, ಉಣ್ಣೆ ಇತ್ಯಾದಿ ಕೀಟಗಳಿಂದ ಹರಡುತ್ತದೆ. ಈ ರೋಗವು ಕಾಣಿಸಿಕೊಂಡರೆ ಜಾನುವಾರುಗಳು ರೋಗದಿಂದ ಸಾಕಷ್ಟು ಬಳಲಿ ಉತ್ಪಾದನೆ ಕಡಿಮೆಯಾಗುವುದಲ್ಲದೆ, ಕೆಲವೊಮ್ಮೆ ಮರಣ ಹೊಂದುತ್ತವೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ.

ಜಿಲ್ಲೆಯಲ್ಲಿ ಸಾಕಷ್ಟು ಜಾನುವಾರು ಸಂತೆಗಳು ನಡೆಯುತ್ತಿದ್ದು, ಜಾನುವಾರು ಸಂತೆಗಳಿಂದ ಆಗುವ ಸಾಗಾಣಿಕೆ/ಚಲನವಲನದಿಂದ ಹಾಗೂ ಹಲವಾರು ಜಾನುವಾರುಗಳನ್ನು ಒಂದೆಡೆ ಸೇರಿಸುವುದರಿಂದ ರೋಗೋದ್ರೇಕವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಸನ ಜಿಲ್ಲೆಯಲ್ಲಿ ಪ್ರಸ್ತುತ 6.58ಲಕ್ಷ ದನಕರು/ ಎಮ್ಮೆಗಳಿದ್ದು, ರೋಗೋದ್ರೇಕವನ್ನು ನಿಯಂತ್ರಸದಿದ್ದಲ್ಲಿ ಸಾಕಾಷ್ಟು ಆರ್ಥಿಕ ನಷ್ಟ ಉಂಟಾಗುವ ಸಂಭವವಿರುವುದರಿಂದ ಜಿಲ್ಲೆಯಾದ್ಯಂತ ಜಾನುವಾರು ಜಾತ್ರೆ/ಸಂತೆಗಳನ್ನು ಹೆಚ್ಚುವರಿಯಾಗಿ ಒಂದು ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಸ್ಥಗಿಸಿಗೊಳಿಸುವಂತೆ ಉಪನಿರ್ದೇಶಕರು ಪಶುಪಾಲನಾ ಇಲಾಖೆ, ಹಾಸನ ರವರ ಪ್ರಸ್ತಾವನೆ ಆಧಾರದ ಮೇಲೆ ಒಂದು ತಿಂಗಳ ಮಟ್ಟಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಜಾನುವಾರು ಜಾತ್ರೆ/ಸಂತೆ/ಸಾಗಾಣಿಕೆ ಒಂದು ತಿಂಗಳು‌ ನಿಷೇದ ಹೇರಲಾಗಿದೆ.

RELATED ARTICLES
- Advertisment -spot_img

Most Popular