ಸಕಲೇಶಪುರ : ಆಕ್ಸ್‌ಫರ್ಡ್ ಶಾಲೆಯಲ್ಲಿ ಪೋಷಕರ ಕ್ರೀಡಾಕೂಟ ಹಾಗೂ ವಿದ್ಯಾರ್ಥಿಗಳು ಪೋಷಕರಿಗೆ, ವಿದ್ಯಾರ್ಥಿಗಳಿಗಾಗಿ ಬೃಹತ್ ಆಹಾರ ಮೇಳ ಆಯೋಜಿಸಿದ್ದರು.
ಶಾಲೆಯಲ್ಲಿ ಮಕ್ಕಳಿಗೆ ವಿದ್ಯೆಯೊಂದಿಗೆ ಉತ್ತಮ ಸಂಸ್ಕಾರಗಳನ್ನು ನೀಡಬೇಕು. ವಿದ್ಯಾರ್ಥಿ ಜೀವನದಲ್ಲಿ ನಾವು ಕಲಿಸುವ ಎಲ್ಲವನ್ನೂ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕಲಿತುಕೊಳ್ಳುತ್ತಾರೆ ಆ ಕಾರಣದಿಂದ ಮಕ್ಕಳ ಪ್ರತಿಭೆಗಳನ್ನು ಗುರುತಿಸುವ ಜೊತೆಗೆ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಪಠ್ಯದ ಜೊತೆಗೆ ವ್ಯವಹಾರ ಜ್ಞಾನ ತಿಳಿದುಕೊಳ್ಳಲು ನೆರವಾಗುವ ಉದ್ದೇಶದಿಂದ ಈ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.
ಆಹಾರ ಮಳಿಗೆ ಶಾಲಾ ಆವರಣದಲ್ಲಿ ಅರವತ್ತಕ್ಕೂ ಹೆಚ್ಚು ಅಹಾರ ಮಳಿಗೆ ತೆರೆಯಲಾಗಿತ್ತು. ಮಕ್ಕಳು ದಕ್ಷಿಣ ಭಾರತ, ಉತ್ತರ ಭಾರತ, ಚೈನಿಸ್, ಥಾಯ್, ತುರ್ಕಿಷ್ ಮತ್ತು ಅರಬಿಯನ್ ಮಾದರಿಯಲ್ಲಿ ರುಚಿ ರುಚಿಯಾದ ಅಹಾರಗಳನ್ನು ಸಿದ್ದಪಡಿಸಿ ತಂದಿದ್ದರು ವಿದ್ಯಾರ್ಥಿಗಳು ಪೋಷಕರು ತಮಗಿಷ್ಟವಾದ ಆಹಾರವನ್ನು ಖರೀದಿಸಿ ರುಚಿ ಸವಿದರು.