BREAKING: ನಾಳೆ ಐದು ಗ್ಯಾರಂಟಿ ಜಾರಿ ಆಗಲ್ಲ!
ನೂತನ ಕಾಂಗ್ರೆಸ್ ಸರ್ಕಾರ ನಾಳೆಯೇ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಸಚಿವ ಸಂಪುಟ ಸಭೆಯು ನಾಳೆಯ ಬದಲು ಶುಕ್ರವಾರಕ್ಕೆ ಮುಂದೂಡಿಕೆಯಾಗಿದ್ದು, ಗ್ಯಾರಂಟಿ ಯೋಜನೆಗಳ ಜಾರಿ ಕನಸಿಗೆ ಪೆಟ್ಟು ಬಿದ್ದಿದೆ. ಇನ್ನು ನಾಡಿದ್ದಾದರೂ ಯೋಜನೆಗಳು ಜಾರಿಯಾಗಲಿ ಎಂದು ಜನ ಆಶಿಸುತ್ತಿದ್ದಾರೆ. ಆದರೆ ಅಂದು ಏನಾಗುತ್ತದೆಯೋ ಕಾದುನೋಡಬೇಕಿದೆ. ಸಿದ್ದರಾಮಯ್ಯ ಅವರು ಇಂದು ಇದೇ ವಿಚಾರ ಸಂಬಂಧ ಸಚಿವರೊಂದಿಗೆ ಸಭೆ ನಡೆಸುತ್ತಿದ್ದಾರೆ.