ಸಕಲೇಶಪುರ : ತಾಲೂಕಿನ ಹೆಬ್ಬನಹಳ್ಳಿಯ ನಿರ್ವಾಣಿ ಕುಟುಂಬದವರಿಗೆ ಸೇರಿದೆ 8 ಎಕರೆ ಕಾಡಿನಲ್ಲಿ ಎರಡು ವರ್ಷಗಳ ಹಿಂದೆ ಶುಂಠಿ ವ್ಯವಸಾಯ ಮಾಡಿ ಬಿಟ್ಟ ಜಾಗದಲ್ಲಿ ಬೆಂಕಿ ತಗುಲಿದ ಕಾರಣ ಬಹುತೇಕ ಸಣ್ಣ ಕಾಪಿ ಗಿಡಗಳು ಬೆಂಕಿಯಿಂದ ಸುಟ್ಟಿ ಹೋಗಿದೆ.
ಹೆಬ್ಬನಹಳ್ಳಿ ಗ್ರಾಮಸ್ಥರ ಸಮಯಪ್ರಜ್ಞೆಯಿಂದ ದೊಡ್ಡ ಬೆಂಕಿ ಅವಘಡ ತಪ್ಪಿಹೋಗಿದೆ.ನಿರ್ವಾಣಿ ಕಾಡಿನ ಸುತ್ತಲೂ ತೋಟಗಳು ಇದ್ದು, ಗ್ರಾಮಸ್ಥರಾದ ಲೋಕೇಶ್, ಸತೀಶ , ನಂಜುಂಡಿ, ಮಲಬಾರ್ ಮೀಸೆ ಬಾಬು , ದೊಡ್ಡದಿಣ್ಣೇ ಸ್ವಾಮಿ ಗೌಡರ ಮ್ಯಾನೇಜರ್ ಬಸವರಾಜು ,ಶೇಖರ್ ರೈಟೆರ್ ಇತರ ಗ್ರಾಮಸ್ಥರು ಹಾಗೂ ತೋಟದ ಕೂಲಿಕಾರ್ಮಿಕರ ಜೊತೆ
ನಿರಂತರ 2 ಘಂಟೆಗಳ ಕಾಲ ಹೋರಾಟ ಮಾಡಿ ಬೆಂಕಿ ಹತೋಟಿಗೆ ತರಲಾಗಿದೆ.ಗ್ರಾಮಸ್ಥರು ದೂರು ನೀಡಿದರು ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿರುವುದಿಲ್ಲ ಸ್ಥಳಕ್ಕೆ ಧಾವಿಸಿದ ಜೆಡಿಎಸ್ ಮುಖಂಡ ಕವನ್ ಗೌಡ ಕೂಡಲೇ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಲು ಪ್ರಯತ್ನಪಟ್ಟರು ಸಾಧ್ಯವಾಗದ ಕಾರಣ ಗ್ರಾಮಾಂತರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಸವರಾಜುರವರಿಗೆ ಗೂಗಲ್ ಲೊಕೇಶನ್ ಹಾಗು ವಿಡಿಯೋವನ್ನು ರವಾನಿಸಿ ಅಗ್ನಿ ಶಾಮಕ ದಳಕ್ಕೆ ಕಳುಹಿಸುವಂತೆ ಕೇಳಿಕೊಂಡು ದೂರವಾಣಿ ಕರೆಮಾಡಿದರು ಸ್ಥಳಕ್ಕೆ ಆಗಮಿಸಿರುವುದಿಲ್ಲ.
ಅಗ್ನಿ ಶಾಮಕ ದಳದ ಮುತುವರ್ಜಿ ಸಾಲದು ಕಾರ್ಯಪ್ರವೃತ್ತರಾಗ ಬೇಕು , ಸರ್ಕಾರ helicopter tourisim ಮಾಡಿದರೆ ಸಾಲದು ಅಗ್ನಿ ನಂದಿಸಲು ಹೆಲಿಕಾಪ್ಟರ ವ್ಯವಸ್ಥೆ ಮಾಡಬೇಕೆಂದು ಕವನ್ ಗೌಡ ಮನವಿ ಮಾಡಿದ್ದಾರೆ.