ಬಣ್ಣ ಬಳಿಯುವ ವಿಷಯಕ್ಕೆ ಓರ್ವನ ಮೇಲೆ ಹಲ್ಲೆ
ಆಲೂರು : ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊರ್ವನ ಮೇಲೆ ಮತೊರ್ವ ವ್ಯಕ್ತಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಶಾಂಭವಿ ಕಲ್ಯಾಣ ಮಂಟಪದಲ್ಲಿ ನಡೆದಿದೆ
ಜಗದೀಶ್ ಎಂಬುವವರೇ ಮಾರಣಾಂತಿಕ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ,
ಶಾಂಭವಿ ಕಲ್ಯಾಣ ಮಂಟಪದಲ್ಲಿ ಕಳೆದ ಎರಡು ದಿನಗಳ ಹಿಂದೆ ಮದುವೆ ಸಮಾರಂಭ ಒಂದರಲ್ಲಿ ಮೋಹನ್ ಮತ್ತು ಜಗದೀಶ್ ಪರಸ್ಪರ ಎದುರುಗೊಂಡಿದ್ದು, ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬಣ್ಣ ಬಳಿಯುವ ವಿಷಯದಲ್ಲಿ ಜಗದೀಶರೊಂದಿಗೆ ಕ್ಯಾತೆ ತೆಗೆದ ಮೋಹನ್ ದೇವಸ್ಥಾನದ ವಿಷಯದಲ್ಲಿ ತಕರಾರು ತೆಗೆದು ಅವಾಸ್ತವಿಕ ಶಬ್ದಗಳಿಂದು ಬೈದು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.
ಇಬ್ಬರು ಒಂದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದು
ಈ ಬಗ್ಗೆ ಪ್ರಕರಣ ಅಲೂರು ಪಟ್ಟಣ ಠಾಣೆಯಲ್ಲಿ ದಾಖಲಾಗಿದೆ.